ಉದ್ಯೋಗಸ್ಥ ಮಹಿಳೆಯರು ಅಡುಗೆ ಮನೆ ಕೆಲಸವನ್ನು ಬಹುಬೇಗ ಮಾಡಿ ಮುಗಿಸಲು ಬಯಸುತ್ತಾರೆ. ಅವರಿಗಾಗಿಯೇ ಕೆಲವು ಹ್ಯಾಕಿಂಗ್ ಟಿಪ್ಸ್ ಗಳಿವೆ ಕೇಳಿ.
ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ಅಡುಗೆ ಕೆಲಸಗಳು ಬಹುಬೇಗ ಮುಗಿಯುತ್ತದೆ ಎನ್ನಲಾಗಿದೆ. ಉಪ್ಪಿನ ಕುದಿಯುವ ಬಿಂದು ನೀರಿಗಿಂತ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಮಸಾಲೆಯನ್ನು ಯಾವ ಘಟ್ಟದಲ್ಲಿ ಸೇರಿಸಬೇಕು ಎಂಬುದರ ಮೇಲೆ ಹಲವು ಅಡುಗೆಗಳ ರುಚಿ ನಿರ್ಧಾರವಾಗುತ್ತದೆ. ಪುಲಾವ್ ತಯಾರಿ ವೇಳೆ ಆರಂಭಿಕ ಹಂತದಲ್ಲೇ ಗರಂಮಸಾಲೆ ಸೇರಿಸಿದರೆ, ಪಲ್ಯ ತಯಾರಿ ವೇಳೆ ಕೊನೆಯ ಹಂತದಲ್ಲಿ ಮಸಾಲೆ ವಸ್ತುಗಳನ್ನು ಸೇರಿಸಿದರೆ ಸಾಕು. ಹಾಗಾಗಿ ಈ ಸಂಗತಿಗಳನ್ನು ಮೊದಲೇ ತಿಳಿದುಕೊಂಡು ಅಡುಗೆ ಮಾಡುವುದು ಒಳ್ಳೆಯದು.
ಸಿಪ್ಪೆ ತೆಗೆಯುವ ಹಾಗೂ ತರಕಾರಿ ಕತ್ತರಿಸುವ ಚಾಕುಗಳನ್ನು ಪ್ರತ್ಯೇಕವಾಗಿಡಿ. ಅಂದರೆ ಈ ಎರಡು ಕೆಲಸಗಳಿಗೆ ಪ್ರತ್ಯೇಕವಾದ ಚಾಕು ಬಳಸಿ. ಇದು ನಿಮ್ಮ ಕತ್ತರಿಸುವ ಕೆಲಸವನ್ನು ಸುಲಭ ಮಾಡುತ್ತದೆ. ಸಾಧ್ಯವಾದಷ್ಟು ಆಧುನಿಕ ಸಲಕರಣೆಗಳನ್ನು ಬಳಸುವುದು, ಕತ್ತರಿಸಲು ಚಾಪರ್, ಬೇಯಿಸಲು ಕುಕ್ಕರ್ ಬಳಸುವುದರಿಂದ ನಿಮ್ಮ ಕೆಲಸ ಸುಲಭವೂ ಬೇಗವೂ ಮುಗಿಯುತ್ತದೆ.