ವಾರವಿಡೀ ಕೆಲಸ ಕೆಲಸ, ವೀಕೆಂಡ್ ಬಂತಂದ್ರೆ ಮನೆ ಕ್ಲೀನಿಂಗ್. ಟೈಮ್ ಸಿಕ್ರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಅನಿಸೋದು ಸಹಜ. ಈ ಬ್ಯುಸಿ ಲೈಫ್ ನಲ್ಲಿ ನಮ್ಮ ಚರ್ಮದ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ವಹಿಸಲು ಸಮಯವೇ ಇಲ್ಲ.
ಆದ್ರೀಗ ಮದುವೆಗಳ ಸೀಸನ್ ಬಂದಿದೆ. ಹಾಗಾಗಿ ಚರ್ಮದ ಬಗ್ಗೆ ಕಾಳಜಿ ವಹಿಸಲೇಬೇಕು. ಪ್ರತಿನಿತ್ಯ ಮೈಲ್ಡ್ ಆಗಿರೋ ಸೋಪ್ ರಹಿತ ಕ್ಲೆನ್ಸರ್ ಬಳಸಿ. ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಹಾಗೂ ಸನ್ ಸ್ಕ್ರೀನ್ ಹಚ್ಚೋದನ್ನು ಮರೆಯಬೇಡಿ. ವಾರಕ್ಕೊಮ್ಮೆ ಚೆನ್ನಾಗಿ ಹೈಡ್ರೇಟ್ ಆಗಬಲ್ಲ ಫೇಸ್ ಮಾಸ್ಕ್ ಹಾಕಿಕೊಳ್ಳಿ.
ಚಳಿಗಾಲದಲ್ಲಂತೂ ಹೊರಹೋಗುವ ಮುನ್ನ ಸನ್ ಸ್ಕ್ರೀನ್ ಹಚ್ಚೋದನ್ನು ಮರೆಯಬೇಡಿ. ಮುಖದಲ್ಲಿ ಇನ್ನಷ್ಟು ಹೊಳಪು ಬರಬೇಕಂದ್ರೆ ಕೆಲವೊಂದು ಸ್ಕಿನ್ ಟ್ರೀಟ್ಮೆಂಟ್ ಗಳನ್ನೂ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಉತ್ತಮ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.
ಇದರ ಜೊತೆಗೆ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಚೆನ್ನಾಗಿ ಕಲರ್ ಬಂದಿರೋ ಉತ್ತಮ ಹಣ್ಣುಗಳನ್ನು ಸೇವಿಸಿದ್ರೆ ತಾನಾಗಿಯೇ ನಿಮ್ಮ ಮುಖದಲ್ಲಿ ಹೊಳಪು ಬರುತ್ತದೆ. ಮುಖದಲ್ಲಿ ನೆರಿಗೆಗಳೆಲ್ಲ ಮಾಯವಾಗಿ ಕಾಂತಿಯುಕ್ತವಾಗಿ ಕಾಣಿಸುತ್ತದೆ. ದಿನಕ್ಕೆ ಕನಿಷ್ಟ 2 ಲೀಟರ್ ನೀರು ಕುಡಿಯುವುದು ಕೂಡ ಅತ್ಯವಶ್ಯ.