ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌ಔಟ್ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ.
ಆದರೆ, ಹೆಚ್ಚಾಗಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂದು ನಾವೆಂದೂ ಸಹ ಚಿಂತನೆ ಮಾಡಿಲ್ಲ.
ಸಂಶೋಧಕರು ಕ್ಯಾಲೋರಿ ನಿಯಂತ್ರಿತ ಪಥ್ಯದ ಪ್ರಯೋಜನಗಳನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ್ದಾರೆ. ಈ ಕ್ಯಾಲೋರಿಗಳು ಕಡಿಮೆ ಇರುವ ಆಹಾರ ಸೇವನೆಯಿಂದ ದೇಹ ಊದುವುದು ತಪ್ಪುವುದಲ್ಲದೇ,
ಕಡಿಮೆ ತಿನ್ನುವ ಕಾರಣಕ್ಕೆ ದೇಹದಲ್ಲಿರುವ ಜೀವಕೋಶಗಳಿಗೆ ವಯಸ್ಸಾಗುವುದನ್ನು ತಡೆಗಟ್ಟುತ್ತದೆ. ಕಡಿಮೆ ಕ್ಯಾಲೊರಿ ಸೇವನೆಯಿಂದ ಆಯುಷ್ಯ ವೃದ್ಧಿಸುತ್ತದೆ ಎಂದು ನಮಗೆಲ್ಲಾ ಚೆನ್ನಾಗೇ ತಿಳಿದಿದೆ.