ಮಹಾಮಾರಿ ಸಾಂಕ್ರಾಮಿಕ ಕೋವಿಡ್-19 ವಿರುದ್ಧ ಹೋರಾಟದಲ್ಲಿ ಹೆಚ್ಚೆಚ್ಚು ಜನರು ಸೋಂಕಿಗೆ ತುತ್ತಾದಂತೆ ವೈರಾಣು ವಿರುದ್ಧ ಹೋರಾಡುವ ಶಕ್ತಿ ಏರಿಕೆ ಆಗಲಿದೆ. ಸಮಾಜದಲ್ಲಿ ಅತಿಹೆಚ್ಚು ಮಂದಿ ಸೋಂಕಿನಿಂದ ಚೇತರಿಕೆ ಕಂಡಂತೆ ’’ಸಮುದಾಯ ರೋಗ ನಿರೋಧಕತೆ’’ ವೃದ್ಧಿಯಾಗಲಿದೆ ಎಂದು ಕೆಲವು ವಿಜ್ಞಾನಿಗಳು ಮತ್ತು ತಜ್ಞವೈದ್ಯರುಗಳು ಹೇಳುತ್ತಿರುವ ವಿಚಾರವು ಮೂರ್ಖರ ಕಲ್ಪನೆ ಅಷ್ಟೇ. ಅಂಥದ್ದು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ’’ಬಿಎ.2’’ ತಳಿಯು ಬಹಳ ಬಲಿಷ್ಠವಾಗಿದೆ. ಇದುವರೆಗಿನ ಕೊರೊನಾ ವೈರಾಣುಗಳಿಗಿಂತ ಬಹಳ ವೇಗವಾಗಿ ಇದು ಹಬ್ಬುತ್ತದೆ. ಹೆಚ್ಚೆಚ್ಚು ಜನರನ್ನು ಒಂದೇ ದಿನದಲ್ಲಿ ಅನಾರೋಗ್ಯಕ್ಕೆ ದೂಡುವ ಸಾಮರ್ಥ್ಯ ಹೊಂದಿದೆ. ಭಾರತ ಮತ್ತು ಡೆನ್ಮಾರ್ಕ್‌ಗಳಲ್ಲಿ ಈ ರೂಪಾಂತರಿಯು ತನ್ನ ಪ್ರಾಬಲ್ಯ ಸಾಧಿಸುತ್ತಿದೆ ಎಂದು ಸೌಮ್ಯ ವಿವರಿಸಿದ್ದಾರೆ.
BIG NEWS: ಹಿಜಾಬ್ ಧರಿಸಿ ಪೋಷಕರೊಂದಿಗೆ ಬಂದ ವಿದ್ಯಾರ್ಥಿಗಳು; ಮತ್ತೆ ತಡೆಯೊಡ್ದಿದ ಕಾಲೇಜು; ಪ್ರತಿಭಟಿಸಿದರೆ FIR ದಾಖಲಿಸುವ ಎಚ್ಚರಿಕೆ
ಎರಡನೇ ಕೊರೊನಾ ಅಲೆ ಉಂಟು ಮಾಡಿದ್ದ ಡೆಲ್ಟಾ ವೈರಾಣುವು ಕೊರೊನಾ ಲಸಿಕೆಗಳಿಗೆ ಮಣಿಯುತ್ತಿತ್ತು. ಆದರೆ, ಬಿಎ.2 ಓಮಿಕ್ರಾನ್ ತಳಿಯು ಲಸಿಕೆಗಳಿಗೆ ಚಳ್ಳೆಹಣ್ಣು ತಿನ್ನಿಸುವಷ್ಟು ಸಾಮರ್ಥ್ಯ ಪಡೆದಿದೆ. ಲಸಿಕೆಗಳಿಂದ ಉದ್ಭವಿಸುವ ಪ್ರತಿಕಾಯಗಳು ವೈರಾಣುವನ್ನು ನಿಗ್ರಹಿಸಲು ಸಾಧ್ಯವಿಲ್ಲ. ಒಂದೇ ಒಂದು ಸಮಾಧಾನಕರ ಸಂಗತಿ ಎಂದರೆ ಕೊರೊನಾ 3ನೇ ಅಲೆಯಲ್ಲಿ ಸಾವಿನ ಸಂಖ್ಯೆ ಮತ್ತು ಗಂಭೀರ ಅಡ್ಡಪರಿಣಾಮಗಳು ಮಾತ್ರ ಗೋಚರವಾಗುತ್ತಿಲ್ಲ ಎಂದು ಸೌಮ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಎರಡು ಡೋಸ್ ಲಸಿಕೆ ಪಡೆದು, ಓಮಿಕ್ರಾನ್ ವೈರಾಣು ಸೋಂಕಿಗೆ ತುತ್ತಾದ ಬಳಿಕ ಚೇತರಿಕೆ ಕಾಣುತ್ತಿರುವವರಲ್ಲಿ ’’ಹೈಬ್ರಿಡ್ ರೋಗನಿರೋಧಕತೆ’’ ಇದೆ. ಇದು ಸದ್ಯದ ಮಟ್ಟಿಗೆ ಬಹಳಷ್ಟು ಪರಿಣಾಮಕಾರಿ ಎಂದು ಅವರು ತಿಳಿಸಿದ್ದಾರೆ.