ನಾವು ಅದೆಷ್ಟೋ ಬಾರಿ ಜಂಕ್ ಫುಡ್ ಗಳಾದ ಪೇಸ್ಟ್ರೀಸ್, ಪಾನಿ ಪುರಿ , ಪಿಜ್ಜಾ, ಬರ್ಗರ್ ಇವುಗಳನ್ನು ತಿನ್ನಬಾರದೆಂದು ಅಂದುಕೊಂಡಿರುತ್ತೀವಿ. ಯಾಕೆಂದರೆ ನಮ್ಮ ತ್ವಚೆಯ ಮೇಲೆ ಇವುಗಳು ತ್ವರಿತವಾದ ಪರಿಣಾಮ ಬೀರುವುದಲ್ಲದೆ, ಮರುದಿನ ಬೆಳಗ್ಗೆಯೇ ಮೊಡವೆಗಳು ಹಾಗೂ ಇನ್ನಿತರ ಸ್ಕಿನ್ ಅಲರ್ಜಿಗಳಿಗೆ ಕಾರಣವಾಗುತ್ತದೆ.
ಆದರೆ ಇವುಗಳಿಂದ ತ್ವಚೆಯನ್ನು ರಕ್ಷಣೆ ಮಾಡುವ ಕೆಲವು ಹರ್ಬಲ್ ವಿಧಾನಗಳನ್ನು ಇಲ್ಲಿ ಹೇಳಲಾಗಿದೆ. ಮೊಡವೆ ಮುಕ್ತ ತ್ವಚೆ ನಿಮ್ಮದಾಗಿಸಿಕೊಳ್ಳಬೇಕೇ, ಹಾಗಿದ್ದರೆ ಈ ಸರಳವಾದ ವಿಧಾನಗಳನ್ನು ಅನುಸರಿಸಿ.
ನೀಮ್, ಅಲೋವೆರಾ ಮತ್ತು ಸೌತೆಕಾಯಿ ಫೇಸ್ ಪ್ಯಾಕ್ : 4-5 ಬೇವಿನ ಎಲೆಗಳು, 1 ಟೇಬಲ್ ಚಮಚ ಅಲೋವೆರಾ ಜೆಲ್ ಮತ್ತು 1-2 ಸಣ್ಣ ಸೌತೆಕಾಯಿ ಚೂರುಗಳು, ಎಲ್ಲವನ್ನು ಸೇರಿಸಿ ಬ್ಲೆಂಡರ್ ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. ನಂತರ ಈ ಪೇಸ್ಟನ್ನು ಮುಖಕ್ಕೆ ಲೇಪಿಸಿ. ಇದು ತ್ವಚೆಯ ಮೇಲಿನ ಕಲೆಗಳನ್ನು ಹೋಗಲಾಡಿಸುವುದಲ್ಲದೇ, ಚರ್ಮವನ್ನು ಮೃದುವಾಗಿಸುತ್ತದೆ.
ಮುಲ್ತಾನಿ ಮಿಟ್ಟಿ : ರೋಸ್ ವಾಟರ್ ಜೊತೆಗೆ ಈ ಮುಲ್ತಾನಿ ಮಿಟ್ಟಿಯನ್ನು ಮಿಕ್ಸ್ ಮಾಡಿ ಹಚ್ಚುವುದರಿಂದ ಮೊಡವೆ ಮತ್ತು ಅದರಿಂದಾದ ಕಲೆಗಳು ಕಡಿಮೆಯಾಗಿ, ತ್ವಚೆಯು ಹೊಳಪನ್ನು ಪಡೆದುಕೊಳ್ಳುತ್ತದೆ.
ಆಮ್ಲ ಫ್ರೂಟ್ ಪೌಡರ್ : ಇದರಲ್ಲಿ ವಿಟಮಿನ್ ಸಿ ಆಂಶ ಹೇರಳವಾಗಿದ್ದು, ನಮ್ಮ ತ್ವಚೆಗೆ ಬಹಳ ಪ್ರಯೋಜನಕಾರಿಯಾಗಿದೆ. ಒಂದು ಚಮಚ ಆಮ್ಲ ಪೌಡರ್ ಅನ್ನು ನೀರಿನೊಂದಿಗೆ ಕಲೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಲೇಪಿಸುವುದರಿಂದ ಚರ್ಮದ ಕಾಂತಿಯನ್ನು ಸುಧಾರಿಸಿ, ತ್ವಚೆಯಲ್ಲಿರುವ ಡೆಡ್ ಸೆಲ್ ಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ತ್ವಚೆಯಲ್ಲಿನ ಸುಕ್ಕುಗಳನ್ನು ಸಹ ತಡೆಗಟ್ಟುತ್ತದೆ.