
ಲಲಿತ್ ಮೋದಿ ಜೊತೆಗೆ ಡೇಟಿಂಗ್ ಇಳಿದಿದ್ದಕ್ಕೆ ಆಕೆಯನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆಯುವುದರಿಂದ ಹಿಡಿದು ಮೀಮ್ಗಳನ್ನು ರಚಿಸುವವರೆಗೆ ಸಾಮಾಜಿಕ ಜಾಲತಾಣದಲ್ಲಿ ಗೋಳಾಡಿಸಿದ್ದಾರೆ. ಈಗ ಹೊಸ ವಿಷಯದ ಮೂಲಕ ಪುನಃ ಆಕೆಯನ್ನು ಎಳೆದುತಂದಿದ್ದಾರೆ.
ಆಕೆ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದ ಪ್ರೊಫೈಲ್ನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಆ ಫೋಟೋ ಸಾಮಾನ್ಯ ಸೆಲ್ಫಿಯಂತೆ ಕಂಡುಬಂದಿದೆ.
ಆದರೆ ಜಾಲತಾಣಿಗರು ಅದರಲ್ಲೊಂದು ಸ್ವಾರಸ್ಯ ಕಂಡುಕೊಂಡಿದ್ದಾರೆ. ಆಕೆ ಧರಿಸಿದ್ದ ಚೌಕಾಕಾರದ ಸನ್ ಗ್ಲಾಸ್ನ ಭಾಗ ಜೂಮ್ ಮಾಡುವ ಮೂಲಕ ಸ್ವಾರಸ್ಯ ಹೆಕ್ಕಿ ತೆಗೆದಿದ್ದಾರೆ. ಆ ಝೂಮ್ ಮಾಡಲಾದ ಭಾಗವನ್ನು ತಮ್ಮ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆಕೆಯ ಎದುರಿಗೆ ಮದ್ಯದ ಬಾಟಲಿಗಳಿದ್ದು, ಆಕೆಯ ಫೋಟೋದಲ್ಲಿ ಅದು ಕಾಣಿಸಿದೆ. ಫೋಟೋ ಝೂಮ್ ಮಾಡಿದಾಗ ಕನ್ನಡಕದಲ್ಲಿ ಅದು ಪ್ರತಿಫಲಿಸುತ್ತದೆ. ನೆಟ್ಟಿಗರು ಅದರಲ್ಲಿ ಮದ್ಯವಿದೆ ಎಂದು ಊಹಿಸಿ ಟ್ರೋಲ್ ಮಾಡಲು ಮುಂದಾದರು. ಇನ್ನು ಕೆಲವರು ಆಕೆಯ ಪರ ನಿಂತರು.