ಬೆಂಗಳೂರು : ಇನ್ಮುಂದೆ ಎಸ್ಎಸ್ಎಲ್ಸಿ, ಪಿಯುಸಿಗೆ 3 ಪಬ್ಲಿಕ್ ಪರೀಕ್ಷೆಇರುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಅವರು ನಾವು ಮಾತು ಕೊಟ್ಟಂತೆ ಎನ್ಇಪಿ ರದ್ದು ಮಾಡಿದ್ದೇವೆ.
ಯಾವುದೇ ಕಾರಣಕ್ಕೆ ಇದರಿಂದ ಹಿಂದೆ ಸರಿಯೋದಿಲ್ಲ. ಹಿಂದಿನ ಪಠ್ಯಕ್ರಮ ಜಾರಿ ಮಾಡಿದ್ದೇವೆ , ಇನ್ಮುಂದೆ ಎಸ್ಎಸ್ಎಲ್ಸಿ, ಪಿಯುಸಿಗೆ 3 ಪಬ್ಲಿಕ್ ಪರೀಕ್ಷೆಇರುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ ಇದರಿಂದ ಮಕ್ಕಳಿಗೆ ಅನುಕೂಲ ಆಗುತ್ತದೆ. ಈ ವ್ಯವಸ್ಥೆ ಎನ್ಇಪಿಯಲ್ಲಿ ಇಲ್ಲ. ಕೆಪಿಎಸ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭ ಮಾಡುವ ವ್ಯವಸ್ಥೆ ಮಾಡ್ತಿದ್ದೇವೆ. ಮುಂದಿನ ವರ್ಷದಿಂದ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.