
ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತ್ವಚೆಗೂ ಅದರಿಂದ ಹಲವಾರು ಉಪಯೋಗಗಳಿವೆ. ಸೀಬೆಕಾಯಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುವುದರಿಂದ ಇದು ತ್ವಚೆಯ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. ಅಲ್ಲದೇ ಇದಲ್ಲಿರುವ ಕಾಪರ್ ನ ಅಂಶವು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಕ್ಯಾನ್ಸರ್ ಉಂಟುಮಾಡುವ ಕೋಶಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ಸೀಬೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್ ಗುಣ ನಮ್ಮ ತ್ವಚೆಯ ಟ್ಯಾನ್ ನಿವಾರಿಸಿ ಬೆಳ್ಳಗಾಗುವಂತೆ ಮಾಡುತ್ತದೆ. ಮೃದುವಾದ ಮತ್ತು ಬೆಳ್ಳಗಿನ ತ್ವಚೆ ಪಡೆಯಲು ಇದು ಸಹಾಯ ಮಾಡುತ್ತವೆ.
ಇದಕ್ಕೆ ಒಂದು ಚಮಚ ಜೇನು ಬೆರೆಸಿ ರುಬ್ಬಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿ 20 ನಿಮಿಷ ಬಳಿಕ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಇದಕ್ಕೆ ನಿಂಬೆರಸ ಸೇರಿಸಿ ಹೆಚ್ಚುವುದರಿಂದಲೂ ಉತ್ತಮ ಪರಿಣಾಮವನ್ನು ಪಡೆಯಬಹುದು.