ಕೇರಳದ ಚೆಟ್ಟಿಕುಲಂ ಮೂಲದ ರಾಹುಲ್ ಎಂಬ ಯುವಕ ಮಾದಕ ವ್ಯಸನಕ್ಕೆ ದಾಸನಾಗಿದ್ದು, ಇದರಿಂದ ಆತನ ತಾಯಿ ಮಿನಿ ಅವರು ತೀವ್ರವಾಗಿ ನೊಂದಿದ್ದಾರೆ. ರಾಹುಲ್ ನನ್ನು ಈ ವ್ಯಸನದಿಂದ ಹೊರತರಲು ಮಿನಿ ಅವರು ಸಾಕಷ್ಟು ಪ್ರಯತ್ನಪಟ್ಟರೂ ಅದ್ಯಾವುದೂ ಫಲ ನೀಡಲಿಲ್ಲ. ಇದರಿಂದ ಬೇಸತ್ತ ಮಿನಿ, ರಾಹುಲ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಹುಲ್ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಪರಾಧಗಳಲ್ಲಿ ಬಂಧಿಸಲ್ಪಟ್ಟಾಗ, ತಾಯಿಯಾದ ಮಿನಿ ಮಗನ ಮನವಿಗೆ ಮರುಗಿ ಎರಡು ಬಾರಿ ಜಾಮೀನಿನಲ್ಲಿ ಹೊರಬರಲು ಸಹಾಯ ಮಾಡಿದ್ದರು. ಆದರೆ, ರಾಹುಲ್ ಜೈಲಿನಿಂದ ಹೊರಬಂದ ಮೇಲೂ ತನ್ನ ಚಟಗಳನ್ನು ಮುಂದುವರೆಸಿದ್ದ. ಇದರಿಂದ ಬೇಸತ್ತ ತಾಯಿ, ರಾಹುಲ್ ನನ್ನು ಪೊಲೀಸರಿಗೆ ಒಪ್ಪಿಸಲು ನಿರ್ಧರಿಸಿದರು.
ರಾಹುಲ್ ತನ್ನ ತಂದೆ, ತಾಯಿ ಮತ್ತು ತಂಗಿಯ ಮೂರುವರೆ ವರ್ಷದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾರಣ ಮಿನಿ ಅವರು ಪೊಲೀಸರಿಗೆ ಕರೆ ಮಾಡಬೇಕಾಯಿತು. ಹಲವು ಪೊಲೀಸ್ ಠಾಣೆಗಳಲ್ಲಿ ಪೋಕ್ಸೊ ಪ್ರಕರಣಗಳಲ್ಲಿ ರಾಹುಲ್ ಆರೋಪಿಯಾಗಿದ್ದಾನೆ.