
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ತೆರೆಯಲಾಗಿದೆ. ಯಾರಾದರೂ ಸಂತ್ರಸ್ತರು ಇದ್ದರೆ ಎಸ್ಐಟಿ ಸಂಪರ್ಕಿಸುವಂತೆ ಪ್ರಕಟಣೆ ನೀಡಲಾಗಿದೆ.
ಕಾನೂನು ನೆರವು, ರಕ್ಷಣೆ, ಯಾವುದೇ ನೆರವು ಬೇಕಿದ್ದಲ್ಲಿ ಎಸ್ಐಟಿಯನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 63609 38947 ಸಂಪರ್ಕಿಸುವಂತೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.