ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಹಿನ್ನೆಲೆ ವಿಧಿಸಲಾಗಿದ್ದ ಸಂಚಾರ ನಿರ್ಬಂಧಗಳಿಂದಾಗಿ ಶುಕ್ರವಾರ ರಾತ್ರಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರ ಬಳಿ ಉತ್ತರ ಪ್ರದೇಶ ಪೊಲೀಸರು ಕ್ಷಮೆಯಾಚಿಸಿದ್ದಾರೆ.
ರಾಮನಾಥ್ ಕೋವಿಂದ್ ತವರು ಭೇಟಿ ಹಿನ್ನೆಲೆ ಕಾನ್ಪುರದಲ್ಲಿ ಸಂಚಾರ ಮಾರ್ಗಸೂಚಿಗಳನ್ನ ಬದಲಾವಣೆ ಮಾಡಲಾಗಿತ್ತು.
ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ರಾಮನಾಥ್ ಕೋವಿಂದ್ ಈ ವೇಳೆ ತಮ್ಮ ತವರಿಗೆ ಭೇಟಿ ನೀಡಿದ್ದಾರೆ. ಇದು ಕಾನ್ಪುರ ದೇಹಾತ್ ಜಿಲ್ಲೆಯ ಪಕ್ಕದ ಗ್ರಾಮವಾಗಿದೆ. ರೈಲಿನಲ್ಲಿ ಅವರು ಕಾನ್ಪುರಕ್ಕೆ ತಡರಾತ್ರಿ ಆಗಮಿಸಿದ್ದರು. ಸೋಮವಾರ ಹಾಗೂ ಮಂಗಳವಾರ ಕೋವಿಂದ್ ಲಕ್ನೋನಲ್ಲಿ ಇರಲಿದ್ದಾರೆ.
ಪುಸ್ತಕ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ
ಭಾರತೀಯ ಕೈಗಾರಿಕಾ ಸಂಘ ಕಾನ್ಪುರದ ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದ 50 ವರ್ಷದ ವಂದನಾ ಮಿಶ್ರಾ ಅನಾರೋಗ್ಯಕ್ಕೀಡಾಗಿದ್ದರು. ಆದರೆ ಆಸ್ಪತ್ರೆಗೆ ಆಕೆಯನ್ನ ಸಾಗಿಸಲು ಸಾಧ್ಯವಾಗದ ಕಾರಣ ಅವರು ಸಾವಿಗೀಡಾಗಿದ್ದಾರೆ. ಮಿಶ್ರಾ ಕೆಲ ದಿನಗಳ ಹಿಂದಷ್ಟೇ ಕೋವಿಡ್ನಿಂದ ಚೇತರಿಸಿಕೊಂಡಿದ್ದರು.
ರಾಮನಾಥ್ ಕೋವಿಂದ್ ಭೇಟಿ ಹಿನ್ನೆಲೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರಿಂದ ವಂದನಾ ಮಿಶ್ರಾರನ್ನ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸೋದು ಸಾಧ್ಯವಾಗದ ಕಾರಣ ಈ ಅನಾಹುತ ಸಂಭವಿಸಿದೆ. ಆಸ್ಪತ್ರೆಗೆ ತೆರಳುವಷ್ಟರಲ್ಲಿ ವಂದನಾ ಮೃತಪಟ್ಟಿದ್ದರು.
ಈ ಕಾರಣಕ್ಕೆ ಪಾಕ್ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..!
ಕಾನ್ಪುರ ಪೊಲೀಸರು ಹಾಗೂ ನನ್ನ ಪರವಾಗಿ, ವಂದನಾ ಮಿಶ್ರಾ ಅವರ ನಿಧನದ ವಾರ್ತೆ ಬಗ್ಗೆ ತುಂಬಾನೇ ವಿಷಾದವಿದೆ. ಇದು ನಮಗೆಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ. ಈ ರೀತಿಯ ನಿರ್ಬಂಧಗಳನ್ನ ನಾವು ಇನ್ಮೇಲೆ ತೀರಾ ಕಡಿಮೆ ಸಮಯದವರೆಗೆ ಮಾತ್ರ ಇಟ್ಟುಕೊಳ್ಳುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತಿದ್ದೇವೆ. ಇಂತಹ ದುರ್ಘಟನೆಗಳು ಪುನರಾವರ್ತನೆಯಾಗೋದಿಲ್ಲ ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಅಸೀಮ್ ಅರುಣ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಈ ಘಟನೆಯಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ನೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.