ಗೂಗಲ್ ಮ್ಯಾಪ್ಸ್ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ನಿಮ್ಮ ಲೊಕೇಶನ್‌ನ ಟ್ರ‍್ಯಾಕ್ ಹಿಡಿದುಕೊಂಡು, ನೀವು ಹೋಗಬೇಕಾದ ಜಾಗದ ದಿಕ್ಕುಗಳನ್ನು ತೋರುವ ಈ ಅಪ್ಲಿಕೇಶನ್, ಅಲ್ಲಿಗೆ ತಲುಪಲು ಹಿಡಿಯುವ ಅವಧಿಯ ಅಂದಾಜು ಹಾಗೂ ಸಂಚಾರ ದಟ್ಟಣೆಯ ಗ್ರಹಿಕೆಯನ್ನು ಸಹ ನೀಡುವ ಒಂದು ಅದ್ಭುತ ಅಪ್ಲಿಕೇಶನ್.
ಈ ಮ್ಯಾಪ್ಸ್‌ನಲ್ಲಿ ಒಂದು ಸಾಧ್ಯತೆಯನ್ನು ಬಳಕೆದಾರರಿಗೆ ಕೊಡಲಾಗಿದ್ದು, ಯಾರು ಬೇಕಾದರೂ ಯಾವುದೇ ಸ್ಥಳದ ಬಗ್ಗೆ ಮಾಹಿತಿ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ಕೆಲವೊಂದು ಚೇಷ್ಟೆ ಮಂದಿ ತಮ್ಮ ವಿನೋದದ ಕ್ಷಣಗಳ ಚಿತ್ರಗಳನ್ನು ಸಂಬಂಧವೇ ಇಲ್ಲದ ಸ್ಥಳಗಳ ವಿವರದ ಮುಂದೆ ಅಪ್ಲೋಡ್ ಮಾಡುವ ನಿದರ್ಶನಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ.
ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ತೆಂಗಿನ ಕಾಯಿ
ಇಂಥದ್ದೇ ನಿದರ್ಶನವೊಂದರಲ್ಲಿ, ಕಪ್ಪು ವಸ್ತ್ರಧಾರಿ ವ್ಯಕ್ತಿಯೊಬ್ಬರು ಗ್ಲೂ ಗನ್ ಹಿಡಿದುಕೊಂಡು ತನ್ನ ಸ್ನೇಹಿತರೊಂದಿಗೆ ಪ್ರಾಂಕ್ ಮಾಡುವ ಚಿತ್ರವೊಂದು ಗೂಗಲ್ ವ್ಯಾನ್‌ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
ಡರ‍್ರೆನ್ ಹನಿಮ್ಯಾನ್ ಹಾಗೂ ಈತನ ಸಹೋದ್ಯೋಗಿ ಡೇವ್ ಹಚಿಸನ್ ಸೇರಿಕೊಂಡು ಡಾರ್ಲಿಂಗ್ಟನ್ ಎಂಬ ಊರಿನಲ್ಲಿರುವ ತಮ್ಮ ಕೆಲಸದ ಜಾಗದಲ್ಲಿ ಹೀಗೊಂದು ಪ್ರಾಂಕ್ ಮಾಡಲು ನಿರ್ಧರಿಸಿದ್ದಾರೆ.
ಮಳೆಗಾಲದಲ್ಲಿ ಒಂದು ಈರುಳ್ಳಿ ಕಾಪಾಡಬಹುದು ನಿಮ್ಮ ‘ಆರೋಗ್ಯ’
ಗೂಗಲ್ ಸ್ಟ್ರೀಟ್‌ವ್ಯೂನಲ್ಲಿ ಕಂಡು ಬರುವ ಈ ಚಿತ್ರದಲ್ಲಿ, ಮೇಲುನೋಟಕ್ಕೆ ಇಬ್ಬರೂ ನಿಜವಾದ ಗನ್ ಅನ್ನೇ ಹಿಡಿದುಕೊಂಡು ಕಚ್ಚಾಡುತ್ತಿದ್ದಾರೆ ಎನಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅದೊಂದು ಪ್ರಾಂಕ್ ಎಂದು ತಿಳಿದು ಬರುತ್ತದೆ.