
ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದ ವ್ಯಕ್ತಿಯೋರ್ವ ಜಲಪಾತದಲ್ಲಿ ಈಜಲು ಹೋಗಿ ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ನಡೆದಿದೆ.
30 ವರ್ಷದ ಅಮಿತ್ ಕುಮಾರ್ ಮೃತ ದುರ್ದೈವಿ. ಛತ್ತೀಸ್ ಗಢ ಮೂಲದವನಾದ ಅಮಿತ್ ಕುಮಾರ್ ಬೆಂಗಳೂರಿನಲ್ಲಿ ವಾಸವಾಗಿದ್ದ. ಭಾನುವಾರ ಸ್ನೇಹಿತರೊಂದಿಗೆ ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಬಂದಿದ್ದ. ಈ ವೇಳೆ ಸಮೀಪವೇ ಇರುವ ಹೆಬ್ಬೆ ಫಾಲ್ಸ್ ಗೆ ಹೋಗಿದ್ದರು.
ಜಲಪಾತದಲ್ಲಿ ಈಜಲೆಂದು ಇಳಿದಿದ್ದ ವೇಳೆ ಅಮಿತ್ ಕುಮಾರ್, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.