
ಬಾಗಲಕೋಟೆ: ಬಾಗಲಕೋಟೆ ಬಾದಾಮಿ ಇತ್ತೀಚಿನ ದಿನಗಳಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ದೇವಸ್ಥಾನದಲ್ಲಿ ಕಲ್ಲಿನ ನಂದಿ ಹಾಲು ಕುಡಿಯುತ್ತಿರುವ ಘಟನೆ ಬೆನ್ನಲ್ಲೇ ಇದೀಗ ಹೆಬ್ಬಳ್ಳಿ ಲಾಲಸಾಬ್ ಅಜ್ಜ ನುಡಿದ ಭವಿಷ್ಯ ಭಾರಿ ಸುದ್ದಿಯಾಗುತ್ತಿದೆ.
ಮೊಹರಂ ಹಬ್ಬದ ವೇಳೆ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಹೆಬ್ಬಳ್ಳಿ ಅಜ್ಜ ಲಾಲಸಾಬ್ ಎಂಬುವವರು ಭವಿಷ್ಯವೊಂದನ್ನು ನುಡಿದಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ. ಕೇಸರಿ ವಸ್ತ್ರ ಹಿಡಿದು ಭವಿಷ್ಯ ಹೇಳಿದ ಲಾಲಸಾಬ್, ’ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ. ಇದರ ಸಲುವಾಗಿ ಹೆಣಗಳು ಹೊಗುತ್ತವೆ… ಆದರೆ ಬರೆದಿಟ್ಟುಕೊಳ್ಳಿ ಕುರ್ಚಿ ಮಾತ್ರ ಗಟ್ಟಿಯಾಗಿದೆ’ ಎಂದು ಹೇಳಿದ್ದಾರೆ.
ದರ್ಗಾದಲ್ಲಿ ಕೇಸರಿ ವಸ್ತ್ರ ಹಿಡಿದು ಹೆಬ್ಬಳ್ಳಿ ಅಜ್ಜ ಭವಿಷ್ಯ ನುಡಿದಿದ್ದು, ಅಜ್ಜನ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.