ಮೈಸೂರು : ಫೆಬ್ರವರಿ 10ರಿಂದ 12ರವರೆಗೆ ಮೈಸೂರಿನ ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಆಯೋಜಿಸಲಾಗಿದ್ದು, ಇಂದು ಮಹಾಕುಂಭಮೇಳದ ಕೊನೆಯ ದಿನವಾಗಿದೆ.
ಈ ಹಿನ್ನೆಲೆ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇಂದು ಕೊನೆಯ ದಿನವಾಗಿದ್ದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ.
2022ರಲ್ಲಿ 12ನೇ ಕುಂಭಮೇಳ ಕೋವಿಡ್ ಕಾರಣ ನಡೆದಿಲ್ಲ. ಹೀಗಾಗಿ ಆರು ವರ್ಷದ ಬಳಿಕ 12ನೇ ಕುಂಭಮೇಳ ನಡೆಯುತ್ತಿದೆ. ಉತ್ತರ ಪ್ರದೇಶಕ್ಕೆ ತೆರಳಿ ಪವಿತ್ರ ಸ್ನಾನ ಮಾಡಲಾಗದವರು ಇಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.