alex Certify ಭಾರಿ ಮಳೆಯಿಂದ ಬೆಳೆ ಹಾನಿ: ಸೋಯಾಬೀನ್ ನಾಶಗೊಳಿಸಿದ ರೈತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮಳೆಯಿಂದ ಬೆಳೆ ಹಾನಿ: ಸೋಯಾಬೀನ್ ನಾಶಗೊಳಿಸಿದ ರೈತರು

Heavy Rains, No Crop Compensation: Hundreds of MP Farmers Destroy Soybean Crops

ಭೋಪಾಲ್: ಮಧ್ಯಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ, ಯಾವುದೇ ರೀತಿಯ ಬೆಳೆ ಪರಿಹಾರವನ್ನು ಕಾಣದ ರೈತರು ತಮ್ಮ ಸೋಯಾಬೀನ್ ಬೆಳೆಗಳನ್ನು ನಾಶಗೊಳಿಸಿದ್ದಾರೆ.

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಸುತ್ತಮುತ್ತಲಿನ ನೂರಾರು ರೈತರು ತಮ್ಮ ಬೆಳೆದು ನಿಂತಿರುವ ಸೋಯಾಬೀನ್ ಬೆಳೆಗಳನ್ನು ಜಾನುವಾರುಗಳಿಗೆ ತಿನ್ನಿಸಲು ಅಥವಾ ಟ್ರ್ಯಾಕ್ಟರ್‌ಗಳ ಸಹಾಯದಿಂದ ಬೆಳೆಗಳನ್ನು ನಾಶಮಾಡಲು ಮುಂದಾಗಿದ್ದಾರೆ.

ಭೋಪಾಲ್‌ನಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಸಾವಿರಾರು ಎಕರೆ ಹೊಲದಲ್ಲಿ ಬೆಳೆಗಳನ್ನು ಕೀಟಗಳು ನಾಶಪಡಿಸಿದ್ದರಿಂದ ಮನನೊಂದ ರೈತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸುಮಾರು 3.25 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾದ ಸೋಯಾಬೀನ್ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ಈ ವರ್ಷ ಖಾರಿಫ್ ಬೆಳೆಯನ್ನು ಸಕಾಲದಲ್ಲಿ ಬಿತ್ತಲಾಯಿತು. ಆದರೆ ಜೂನ್-ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಯಿತು ಎಂದು ರೈತರು ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ಸೋಯಾಬೀನ್ ಬೆಳೆ ನಿರಂತರ ಹಾನಿಯನ್ನು ಎದುರಿಸುತ್ತಿದೆ. ಪ್ರತಿ ವರ್ಷವೂ ರೈತರ ಸ್ಥಿತಿ ಹದಗೆಡುತ್ತಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಮೇವಾಡ ತಿಳಿಸಿದರು. ಕಳೆದ ಎರಡು ವರ್ಷಗಳಿಂದ ರೈತರು ಕೂಡ ಪ್ರಕೃತಿ ವಿಕೋಪಗಳಿಂದ ಉಂಟಾದ ಹಾನಿಗೆ ಯಾವುದೇ ಬೆಳೆ ಪರಿಹಾರವನ್ನು ಪಡೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಫ್ಘನ್ ಮಹಿಳೆಯರ ಆತಂಕ ಹೆಚ್ಚಿಸಿದ ತಾಲಿಬಾನಿ ಭಯೋತ್ಪಾದಕರ ನಡೆ

ಈ ವರ್ಷವೂ ಬೆಳೆ ಹಾನಿಗೀಡಾಗಿದ್ದು, ಶೇ.100 ರಷ್ಟು ಬೆಳೆಗಳ ನಾಶವನ್ನು ಕಂಡ ಹಲವಾರು ಹಳ್ಳಿಗಳಿವೆ ಎಂದು ಮೇವಾಡ ಹೇಳಿದರು. ಸೇವ್ಯಾನಿಯಾ ಹಳ್ಳಿಯ ಶಾಂತಾ ಬಾಯಿ ಎಂಬುವವರು ಈ ವರ್ಷ ಪ್ರತಿ ಕ್ವಿಂಟಾಲ್ ಬೀಜಕ್ಕೆ 10,000 ರೂ.ಗಳನ್ನು ನೀಡಿ ಖರೀದಿಸಿದ್ದರು ಹಾಗೂ ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಎರವಲು ಪಡೆದಿದ್ದರು. ಆದರೆ, ಅವರ ಹೊಲಗಳಲ್ಲಿ ಏನೂ ಬೆಳೆಯಲಿಲ್ಲ ಎಂದು ಹೇಳಿದರು.

“ನಾವು ಏನು ತಿನ್ನಬೇಕು ಮತ್ತು ನಾವು ನಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂದು ಮಹಿಳೆ ಹಲವಾರು ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಒಬ್ಬ ಸರ್ಕಾರಿ ಅಧಿಕಾರಿಯೂ ತಮ್ಮ ಹೊಲಗಳಿಗೆ ಭೇಟಿ ನೀಡಲಿಲ್ಲ” ಎಂದು ಆರೋಪಿಸಿದರು.

ಇನ್ನು ಈ ಭಾಗದಲ್ಲಿ ಹಣ್ಣುಗಳನ್ನು ನೀಡದ ಸಸ್ಯಗಳು ಬೆಳೆಯುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. “ನಾವು ಸಾವಿರಾರು ರೂ.ಗಳನ್ನು ಹೂಡಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಆದರೆ ನಮಗೆ ಫಸಲು ದೊರೆತಿಲ್ಲ. ನಾವು ಬ್ಯಾಂಕ್ ಸಾಲವನ್ನು ಹೇಗೆ ಮರುಪಾವತಿಸಬೇಕು” ಎಂದು ನೊಂದ ರೈತ ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಸಾಹಿಬಾಬಾದ್ ಗ್ರಾಮ ಪಂಚಾಯಿತಿಯ ರೈತ ಕಮಲ್ ಪರ್ಮಾರ್ ಹೇಳುವಂತೆ, ಈ ಪ್ರದೇಶದ ಹಲವಾರು ಹಳ್ಳಿಗಳು ಸೋಯಾಬೀನ್ ಮತ್ತು ಮೆಕ್ಕೆಜೋಳ ಬೆಳೆಗಳನ್ನು ಕೀಟಗಳು ಮತ್ತು ಹುಳಗಳಿಂದ ನಾಶಪಡಿಸುತ್ತಿವೆ. ಇದರಿಂದ ನೂರಾರು ರೈತರು ಬೆಳೆಗಳನ್ನು ನಾಶ ಮಾಡಿದ್ದಾರೆ ಎಂದು ಪರ್ಮಾರ್ ಎಂಬುವವರು ಹೇಳಿದರು.

ಹಲವಾರು ರೈತರು ಸೆಹೋರ್ ಕಲೆಕ್ಟರೇಟ್ ಬಳಿ ಬಂದು ತಮ್ಮ ಹಾನಿಗೊಳಗಾದ ಬೆಳೆಗಳೊಂದಿಗೆ ಪ್ರತಿಭಟನೆ ನಡೆಸಿದರು. ತಕ್ಷಣ ತಮ್ಮ ಜಾಗದ ಸಮೀಕ್ಷೆ ಮತ್ತು ಬೆಳೆ ವಿಮೆ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿದರು. ಸಹಕಾರಿ ಸಂಸ್ಥೆಗೆ ಸಂಯೋಜಿತವಾಗಿರುವ ಜಿಲ್ಲೆಯ 42,000 ರೈತರು ಮೂರು ವರ್ಷಗಳವರೆಗೆ ಬೆಳೆ ವಿಮೆ ಮೊತ್ತಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ವೇಳೆ ರೈತರ ಸಮಸ್ಯೆ ಆಲಿಸಿದ ಡೆಪ್ಯೂಟಿ ಕಲೆಕ್ಟರ್ ಆದಿತ್ಯ ಕುಮಾರ್ ಜೈನ್, ಕೃಷಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಬೆಳೆ ಸಮೀಕ್ಷೆ ಯೋಜನೆ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು.

ಇದು ಸೆಹೋರ್‌ನ ಸಮಸ್ಯೆ ಮಾತ್ರವಲ್ಲ, ಮಂಡಸೌರ್, ನೀಮುಚ್, ರತ್ಲಾಮ್, ಇಂದೋರ್ ಮತ್ತು ಇತರ ಜಿಲ್ಲೆಗಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕೇದಾರ್ ಸಿರೋಹಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...