ದಕ್ಷಿಣ ತಮಿಳುನಾಡಿನಲ್ಲಿ ಭಾನುವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತಮಿಳುನಾಡಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಲವು ರೈಲುಗಳ ಸಂಚಾರ ರದ್ದಾಗಿದೆ.
ನಾಲ್ಕು ಜಿಲ್ಲೆಗಳಲ್ಲಿ ಭಾನುವಾರ ಭಾರಿ ಮಳೆಯಾಗಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಪ್ರತಿಕೂಲ ಹವಾಮಾನದಿಂದಾಗಿ ಸೋಮವಾರ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್ ಆಗಿದೆ. ರೈಲು ಹಳಿಗಳು ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದೆ. ಹಲವಾರು ರೈಲುಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ರದ್ದುಗೊಂಡ ರೈಲುಗಳ ಪಟ್ಟಿ
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಳಿಗಳು ಮತ್ತು ರೈಲ್ವೆ ಯಾರ್ಡ್ ಗಳಿಗೆ ಮಳೆ ನೀರು ನುಗ್ಗಿದ ನಂತರ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ.
ರದ್ದಾದ ರೈಲುಗಳೆಂದರೆ:
ರೈಲು ಸಂಖ್ಯೆ 06673 ತಿರುನೆಲ್ವೇಲಿ-ತಿರುಚೆಂಡೂರ್ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 06405 ತಿರುಚೆಂಡೂರ್-ತಿರುನೆಲ್ವೇಲಿ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 06674 ತಿರುಚೆಂಡೂರ್-ತಿರುನೆಲ್ವೇಲಿ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 06675 ತಿರುನೆಲ್ವೇಲಿ-ತಿರುಚೆಂಡೂರ್ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 20666 ತಿರುನೆಲ್ವೇಲಿ-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್ಪ್ರೆಸ್
ರೈಲು ಸಂಖ್ಯೆ 20665 ಚೆನ್ನೈ ಎಗ್ಮೋರ್-ತಿರುನೆಲ್ವೇಲಿ ವಂದೇ ಭಾರತ್ ಎಕ್ಸ್ಪ್ರೆಸ್
ರೈಲು ಸಂಖ್ಯೆ 19577 ತಿರುನೆಲ್ವೇಲಿ-ಜಾಮ್ನಗರ್ ಎಕ್ಸ್ಪ್ರೆಸ್
ರೈಲು ಸಂಖ್ಯೆ 16732 ತಿರುಚೆಂಡೂರ್-ಪಾಲಕ್ಕಾಡ್ ಎಕ್ಸ್ಪ್ರೆಸ್
ರೈಲು ಸಂಖ್ಯೆ 06848 ವಾಂಚಿ ಮಣಿಯಾಚಿ-ಟ್ಯುಟಿಕೋರಿನ್ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 06671 ಟ್ಯುಟಿಕೋರಿನ್-ವಾಂಚಿ ಮಣಿಯಾಚಿ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 06668 ತಿರುನೆಲ್ವೇಲಿ-ಟ್ಯುಟಿಕೋರಿನ್ ಕಾಯ್ದಿರಿಸದ ವಿಶೇಷ ರೈಲು
ರೈಲು ಸಂಖ್ಯೆ 06667 ಟ್ಯುಟಿಕೋರಿನ್-ತಿರುನೆಲ್ವೇಲಿ ಕಾಯ್ದಿರಿಸದ ವಿಶೇಷ ರೈಲು
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಟ್ಯುಟಿಕೋರಿನ್ ಜಿಲ್ಲೆಯ ತಿರುಚೆಂಡೂರಿನಲ್ಲಿ ಸೋಮವಾರ ಮುಂಜಾನೆ 1:30 ರವರೆಗೆ 606 ಮಿ.ಮೀ ಮಳೆಯಾಗಿದೆ. ಶನಿವಾರದಿಂದ (ಡಿಸೆಂಬರ್ 16) ದಕ್ಷಿಣ ತಮಿಳುನಾಡಿನ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ ದಾಖಲಾಗಿದೆ.
ಸರ್ಕಾರದಿಂದ ಕ್ರಮ
ಭಾರೀ ಮಳೆ ಹಿನ್ನೆಲೆ ತಮಿಳುನಾಡು ಸರ್ಕಾರವು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಪ್ರವಾಹ ಎಚ್ಚರಿಕೆಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ನಾಲ್ಕು ಪೀಡಿತ ಜಿಲ್ಲೆಗಳಿಗೆ ಸಚಿವರನ್ನು ಕಳುಹಿಸಿದೆ.