ರಾಮನಗರ: ಭಾರಿ ಮಳೆಯಿಂದಾಗಿ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಇನ್ನೊಂದೆಡೆ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ವಾಹನಗಳು ಮಳೆ ನೀರಿನಲ್ಲಿ ತೇಲಿಬರುತ್ತಿವೆ.
ವರುಣಾರ್ಭಟಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದ್ದು, ದಶಪಥ ರಸ್ತೆ ನದಿಯಂತಾಗಿದ್ದು, ಪ್ರವಾಹದಂತೆ ಉಕ್ಕಿ ಬರುತ್ತಿರುವ ನೀರಿನಲ್ಲಿ ಹಲವು ವಾಹನಗಳು ತೇಲಿಬರುತ್ತಿವೆ.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದ್ದು, ರಾಮನಗರದ ಬಳಿ ಬಸ್, ಕಾರುಗಳು ಮುಳುಗಡೆಯಾಗಿವೆ. ಬಸ್ ನಲ್ಲಿದ್ದ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆದಿದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಸಾಗುತ್ತಿದ್ದ ಕಾರುಗಳು ನೀರಿನ ರಭಸಕ್ಕೆ ಪಲ್ಟಿಯಾಗಿವೆ.
ಇನ್ನು ರಾಮನಗರದ ರೈಲ್ವೆ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದ್ದು, ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.