ಭಾರೀ ಬಿಸಿಲಿನಿಂದ ಆಸ್ಟ್ರೇಲಿಯಾದಲ್ಲಿ ಮಿಲಿಯನ್ ಗಟ್ಟಲೆ ಮೀನುಗಳು ಸಾವನ್ನಪ್ಪಿವೆ. ನ್ಯೂ ಸೌತ್ ವೇಲ್ಸ್‌ನ ಡಾರ್ಲಿಂಗ್ ನದಿಯ ತೀರದಲ್ಲಿ ಲಕ್ಷಾಂತರ ಮೀನುಗಳು ನಿರ್ಜೀವವಾಗಿ ತೇಲುತ್ತಿರುವುದು ಕಂಡುಬಂದಿದೆ.
ಈ ಘಟನೆಯು ಪ್ರದೇಶವು ಎದುರಿಸುತ್ತಿರುವ ಹವಾಮಾನ ಬಿಕ್ಕಟ್ಟಿನ ಬಗ್ಗೆ ಜನರನ್ನು ಬೆಚ್ಚಿಬೀಳಿಸಿತು ಮತ್ತು ಆತಂಕಕ್ಕೊಳಗಾಗುವಂತೆ ಮಾಡಿದೆ.
ಬಿಸಿ ವಾತಾವರಣ ಅಥವಾ ಶಾಖದ ಅಲೆಯಿಂದಾಗಿ ಮೀನುಗಳ ಸಾವು ಸಂಭವಿಸಿರಬಹುದೆಂದು ಮಾಧ್ಯಮಗಳು ಸೂಚಿಸಿದರೆ, ನೀರಿನಲ್ಲಿ ಆಮ್ಲಜನಕದ ಕೊರತೆಯಿಂದ (ಹೈಪೋಕ್ಸಿಯಾ) ಮೀನುಗಳ ಸಾವು ಸಂಬಂಧಿಸಿದೆ ಎಂದು ಸರ್ಕಾರ ಹೇಳುತ್ತಿದೆ.
https://twitter.com/kk0000000000/status/1636949121658662913?ref_src=twsrc%5Etfw%7Ctwcamp%5Etweetembed%7Ctwterm%5E1636949121658662913%7Ctwgr%5E85275d269931573e15fa728f5bc6148ec09e528f%7Ctwcon%5Es1_&ref_url=https%3A%2F%2Fd-1563277533401414073.ampproject.net%2F2302271541000%2Fframe.html