ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಗೌತ್ತಿದ್ದು, ರಣಬಿಸಿಲಿಗೆ ಈಗಾಗಲೇ ಜನರು ತತ್ತರಿಸಿ ಹೊಗಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ಬಿಸಿಗಾಳಿ ಎಚ್ಚರಿಕೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಉಷ್ಣಹವೆ ಆರಂಭವಾಗಿದ್ದು, ಬಿಸಿಗಾಳಿಯಿಂದಾಗಿ ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಸರ್ಕಾರಿ ಆಸ್ಪತ್ರೆಗೆಗಳಲ್ಲಿ ಪ್ರತ್ಯೇಕ ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪಿಸಿದೆ.
ಬಿಸಿಗಾಳಿಯಿಂದ ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ನಿತ್ರಾಣವಾಗುವ ಸಾಧ್ಯತೆ ಇದೆ. ಹೀಟ್ ಸ್ಟ್ರೋಕ್ ಗೆ 3-4 ದಿನಗಳ ಕಾಲ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ತೆರೆಯಲಾಗಿದೆ. ಐದು ಬೆಡ್ ಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ವಾರ್ಡ್ ನಲ್ಲಿ ಏರ್ ಕೂಲರ್, ಫ್ಯಾನ್, ಔಷಧ ವ್ಯವಸ್ಥೆ ಮಾಡಲಾಗಿದೆ.
ಹೀಟ್ ಸ್ಟ್ರೋಕ್ ನಿಂದ ಜ್ವರ, ತಲೆನೋವು, ತಲೆಸುತ್ತು, ನಿತ್ರಾಣ ಕಾಣಿಸಿಕೊಂಡಲ್ಲಿ ಹೋಟ್ ಸ್ಟ್ರೋಕ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ.