
ಕೆನಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಹುರಿದುಂಬಿಸಲು ಕಿಟಕಿ ಕ್ಲೀನರ್‌ಗಳು ಕೆಲಸ ಮಾಡುವಾಗ ಸೂಪರ್ ಹೀರೋಗಳಾಗಿ ಮಾರ್ಪಟ್ಟಿದ್ದಾರೆ. ಮಕ್ಕಳನ್ನು ಖುಷಿಪಡಿಸಲು, ಅವರ ಮುಖದಲ್ಲಿ ನಗು ತರಿಸಲು ಸೂಪರ್ ಹೀರೋ ವೇಷಭೂಷಣಗಳನ್ನು ಧರಿಸಿರುವ ವಿಂಡೋ ಕ್ಲೀನರ್ ತಂಡವು ಗಮನಸೆಳೆದಿವೆ.
ಕ್ಲೀನರ್‌ಗಳು ಹಲ್ಕ್, ಥಾರ್, ಸ್ಪೈಡರ್ ಮ್ಯಾನ್, ಬ್ಯಾಟ್‌ಮ್ಯಾನ್ ಮತ್ತು ಐರನ್ ಮ್ಯಾನ್‌ನ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿದ್ದರು.
ವೈರಲ್ ಆಗಿರುವ ಚಿತ್ರಗಳಲ್ಲಿ, ಸೂಪರ್ ಹೀರೋಗಳು ಮಕ್ಕಳ ಕೋಣೆಗಳ ಕಿಟಕಿಗಳಲ್ಲಿ ಕಾಣಿಸಿಕೊಂಡರೆ ಪೋಷಕರು ಅವರನ್ನು ತೋರಿಸಲು ತಮ್ಮ ಮಕ್ಕಳನ್ನು ಕರೆದೊಯ್ಯುತ್ತಿರುವುದು ಕಂಡುಬಂದಿದೆ.
ಗುಡಬಲ್ ಎಂಬ ಟ್ವಿಟರ್ ಪುಟವು ಚಿತ್ರಗಳನ್ನು ಹಂಚಿಕೊಂಡಿದೆ. ಕಿಟಕಿ ಕ್ಲೀನರ್‌ಗಳು ಪ್ರೋತ್ಸಾಹದಾಯಕ ವರ್ಡಿಂಗ್ ಇರುವ ಪೋಸ್ಟರ್‌ಗಳನ್ನು ತೋರಿಸಿ ಅನಾರೋಗ್ಯ ಪೀಡಿತ ಮಕ್ಕಳೊಂದಿಗೆ ಪೋಸ್ ನೀಡಿದರು.
ಕೇವಲ 4 ತಿಂಗಳ ವಯಸ್ಸಿನಲ್ಲಿ ಹಿಮೋಫಿಲಿಯಾದಿಂದ ಬಳಲುತ್ತಿರುವ ಎಲಿಶಾ ಅಲಾರಿಯೊಸ್ ತನ್ನ ನೆಚ್ಚಿನ ಸೂಪರ್‌ಹೀರೋ ಕಟ್ಟಡ ಏರುವುದನ್ನು ನೋಡಲು ಉತ್ಸುಕಳಾಗಿದ್ದಳು. ಈ ಕಾಮಿಕ್ ಹೀರೋಗಳಿಂದ ಮಗು ಸಾಕಷ್ಟು ಸ್ಫೂರ್ತಿಯನ್ನು ಪಡೆದಿದೆ ಎಂದು ಆಕೆಯ ತಂದೆ ಡೇವಿಡ್ ಅಲಾರಿಯೋಸ್ ಮಾಧ್ಯಮಕ್ಕೆ ಹೇಳಿದ್ದಾರೆ.