
ಸಚಿವ ವಿ. ಶಿವನಕುಟ್ಟಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ವೈರಲ್ ಆಗಿದ್ದು, 5 ನೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಧ್ಯಾಹ್ನದ ಊಟದ ನಂತರ ತಮ್ಮ ದೈಹಿಕ ವಿಕಲಾಂಗ ಸಹಪಾಠಿಗೆ ನಿಸ್ವಾರ್ಥವಾಗಿ ಸಹಾಯ ಮಾಡಿದೆ.
ವೈರಲ್ ವೀಡಿಯೊದಲ್ಲಿ, ಊಟವಾದ ನಂತರ ಒಬ್ಬ ವಿದ್ಯಾರ್ಥಿ ತನ್ನ ಸ್ನೇಹಿತನ ಮುಖ ಮತ್ತು ಬಾಯಿಯನ್ನು ತೊಳೆಯುತ್ತಾನೆ, ಅವನ ಪ್ಲೇಟ್ ಅನ್ನು ಸ್ವಚ್ಛಗೊಳಿಸುತ್ತಾನೆ. ಹತ್ತಿರದಲ್ಲಿ, ಇನ್ನೊಬ್ಬ ಸಹಪಾಠಿ ತಾಳ್ಮೆಯಿಂದ ನಿಂತಿದ್ದು, ಅವನನ್ನು ತರಗತಿಗೆ ಮರಳಿ ಕರೆದುಕೊಂಡು ಹೋಗಲು ರೆಡಿಯಾಗಿದ್ದಾನೆ. ಬಳಿಕ ಗಾಲಿ ಕುರ್ಚಿಯಲ್ಲಿ ಕೂರಿಸಿಕೊಂಡು ಸ್ನೇಹಿತನನ್ನು ತರಗತಿಗೆ ಕರೆದುಕೊಂಡು ಹೋಗಿದ್ದಾನೆ.
ನೆಟಿಜನ್‌ಗಳು ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ, ಅವರ ಸಹಪಾಠಿಯ ಬಗ್ಗೆ ಹೊಂದಿರುವ ಕಾಳಜಿಯನ್ನು ಶ್ಲಾಘಿಸಿದ್ದಾರೆ. ಈ ವೀಡಿಯೊ ವ್ಯಾಪಕ ಗಮನ ಮತ್ತು ಮೆಚ್ಚುಗೆಯನ್ನು ಪಡೆದುಕೊಂಡಿದೆ, ವೀಕ್ಷಕರಿಂದ ಸಾವಿರಾರು ಪ್ರಶಂಸೆಗಳನ್ನು ಗಳಿಸಿದೆ.