ತಮ್ಮ ಆರು ತಿಂಗಳ ಮಗುವಿನ ಎದುರೇ ಮದುವೆ ಮಾಡಿಕೊಳ್ಳುವುದು ಕರೀಂ ಹಾಗೂ ಲೌಸಿ ರೇಜ಼ೆ ಕನಸಾಗಿತ್ತು. ಆದರೆ ಪುಟಾಣಿ ಲೇಲಾ ಬೇಬಿಗೆ ಅಪರೂಪದ ಕಾಯಿಲೆಯಾದ ಚಾರ್ಜ್ ಸಿಂಡ್ರೋಮ್‌ನಿಂದಾಗಿ ಆಕೆಯ ದೃಷ್ಟಿ, ಜೀರ್ಣಾಂಗ ವ್ಯವಸ್ಥೆ ಹಾಗೂ ಹೃದಯಗಳ ಮೇಲೆ ಅಪಾರವಾದ ದುಷ್ಪರಿಣಾಮಗಳಾಗಿವೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಲೇಲಾ ತನ್ನ ಅಪ್ಪ-ಅಮ್ಮನ ಮದುವೆಯನ್ನು ಕಣ್ತುಂಬಿಕೊಳ್ಳಲು ಚರ್ಚ್‌ಗೆ ಹೋಗಲು ಸಾಧ್ಯವಿರಲಿಲ್ಲ.
ನೇರ ಪ್ರಸಾರದ ವೇಳೆಯೇ ಎಡವಟ್ಟು ಮಾಡಿಕೊಂಡ ವರದಿಗಾರ್ತಿ
ಹೀಗಾಗಿ ಬ್ರಿಸ್ಟಾಲ್‌ನ ಮಕ್ಕಳ ಆಸ್ಪತ್ರೆಯಲ್ಲಿ ಲೇಲಾ ದಾಖಲಾಗಿರುವ ಹಾಸಿಗೆಯ ಬಳಿಯೇ ವಿವಾಹದ ಉಂಗುರ ಬದಲಿಸಿಕೊಂಡಿದ್ದಾರೆ ಕರೀಂ ಮತ್ತು ರೇಜ಼ೆ. ಇವರ ಈ ಮದುವೆಯ ಪ್ಲಾನ್‌ಗೆ ಆಸ್ಪತ್ರೆಯ ಸಿಬ್ಬಂದಿ ಸಹ ಜೊತೆಗೆ ನಿಂತು ಭಾವಪೂರ್ಣವಾದ ಬೆಂಬಲ ಕೊಟ್ಟಿದ್ದಾರೆ.
ಕೊರೊನಾದಿಂದ ಅನಾಥರಾದ 100 ಮಕ್ಕಳ ಬಾಳಿಗೆ ಬೆಳಕಾಗಲು ಮುಂದಾದ ಯುವಕ
ಚಾರ್ಜ್ ಸಿಂಡ್ರೋಮ್‌ಗೆ ತುತ್ತಾಗುವ ಮಕ್ಕಳು ಬದುಕುಳಿಯುವುದು ಕಷ್ಟವಾಗಿತ್ತು. ಆದರೆ ಇತ್ತೀಚಿಗೆ ಸಾಕಷ್ಟು ಸುಧಾರಿತ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿರುವ ಕಾರಣ ಬದುಕುಳಿಯುವ ಸಾಕಷ್ಟು ಸಾಧ್ಯತೆಗಳಿವೆ.