ಶಿಕ್ಷಣವು ಯಶಸ್ಸಿನ ಪ್ರಮುಖ ಅಂಶಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಇಂದಿನ ಕಾಲದಲ್ಲಿ, ಮಾಜಿ ಇಂಜಿನಿಯರ್ ಒಬ್ಬರು ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ಕರುಣಾಜನಕ ಕಥೆ ಹೃದಯವಿದ್ರಾವಕವಾಗಿದೆ. ಈ ವ್ಯಕ್ತಿ ತನ್ನ ಜೀವನದಲ್ಲಿಎದುರಿಸಿದ ಕೆಲ ಅನಿರೀಕ್ಷಿತ ಘಟನೆಗಳಿಂದ ಮದ್ಯದ ದಾಸನಾಗಿ ಈಗ ಇಂತಹ ಸ್ಥಿತಿಗೆ ತಲುಪಿದ್ದಾನೆ ಎನ್ನಲಾಗಿದೆ.
ಟೆಕ್ ವೃತ್ತಿಪರರು, ಉದ್ಯಮಿಗಳು ಮತ್ತು ಜಾಗತಿಕ ವ್ಯಾಪಾರ ಕೇಂದ್ರವಾಗಿರುವ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿಯನ್ನು ಕಂಟೆಂಟ್ ಕ್ರಿಯೇಟರ್ ಸಂಪರ್ಕಿಸಿದಾಗ ಅವರ ಜೀವನದ ನೋವಿನ ಕಥೆ ತೆರೆದುಕೊಂಡಿದೆ.
ಈ ಭಿಕ್ಷುಕ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿದ್ದು, ಸಂಭಾಷಣೆ ಮುಂದುವರೆದಂತೆ ತಾನು ಒಮ್ಮೆ ಯಶಸ್ವಿ ಇಂಜಿನಿಯರ್ ಆಗಿದ್ದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಈ ಭಿಕ್ಷುಕ ತಾನು ಬೆಂಗಳೂರಿನ ಗ್ಲೋಬಲ್ ವಿಲೇಜ್ ಮತ್ತು ಜರ್ಮನಿಯ ಫ್ರಾಂಕ್ಫರ್ಟ್ ಸೇರಿದಂತೆ ಪ್ರತಿಷ್ಠಿತ ಸ್ಥಳಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ ಎಂಬುದನ್ನು ಹಂಚಿಕೊಂಡಿದ್ದು, ಆದಾಗ್ಯೂ, ಹೆತ್ತವರ ಅಕಾಲಿಕ ಮರಣದ ನಂತರ ಜೀವನವು ಅನಿರೀಕ್ಷಿತ ತಿರುವು ಪಡೆದುಕೊಂಡಿತು ಎಂದಿದ್ದಾರೆ.
ತನ್ನ ನೋವಿನಿಂದ ಪಾರಾಗಲು ಮದ್ಯದ ಮೊರೆ ಹೋದ ವ್ಯಕ್ತಿ ಬಳಿಕ ಅದನ್ನೇ ವ್ಯಸನವನ್ನಾಗಿ ಮಾಡಿಕೊಂಡಿದ್ದು, ಉದ್ಯೋಗ, ಹಣ ಸೇರಿದಂತೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಅಂತಿಮವಾಗಿ ಜೀವನ ನಿರ್ವಹಣೆ ಮಾಡಲು ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎನ್ನಲಾಗಿದೆ.
View this post on Instagram