ಬೆಂಗಳೂರು : ಬೆಂಗಳೂರಿನ ಹೃದಯ ವಿದ್ರಾವಕ ಘಟನೆ ನಡೆದಿದ್ದು, ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೃತ ಹಳ್ಳಿಯಲ್ಲಿ ನಡೆದಿದೆ.
ರಾಚೇನಹಳ್ಳಿಯಲ್ಲಿ ನಿನ್ನೆ ಪ್ರಿಯಕರ ಜಾನ್ಸನ್ (25) ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ವಿಚಾರ ತಿಳಿದು ಪ್ರಿಯತಮೆ ದಿಲ್ಶಾದ್ ಶ್ರೀರಾಂಪುರದ ಸಂಪಿಗೆಹಳ್ಳಿಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಿಲ್ಶಾದ್ ಗೆ ಈಗಾಗಲೇ ಮದುವೆಯಾಗಿತ್ತು, ಆದರೆ ಜಾನ್ಸನ್ ಗೆ ಇನ್ನೂ ಮದುವೆಯಾಗಿರಲಿಲ್ಲ. ನಮ್ಮ ಮದುವೆಗೆ ಸಮಾಜ ಒಪ್ಪಲ್ಲ ಎಂದು ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಮನನೊಂದ ದಿಲ್ಶಾದ್ ಕೂಡ ಸೂಸೈಡ್ ಮಾಡಿದ್ದಾರೆ.ಅಲ್ಲದೇ ದಿಲ್ಶಾದ್ ಮನೆಯಲ್ಲಿ ಅತ್ತೆ ಮಾವ ಕಾಟ ಕೊಡುತ್ತಿದ್ದರು ಎಂದು ಮೃತ ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.