ಮಧ್ಯಪ್ರದೇಶದ ಬಂಧವಘಡ ರಾಷ್ಟ್ರೀಯ ಉದ್ಯಾನವನದ ಬಳಿಯ ಭರಹುತ್ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ, ಬೆಂಥೋ ಎಂಬ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕ ಶಿವಂ ಬರ್ಗಯ್ಯ ಅವರನ್ನು ಹುಲಿ ದಾಳಿಯಿಂದ ರಕ್ಷಿಸಿ ಪ್ರಾಣತ್ಯಾಗ ಮಾಡಿದೆ. ಶಿವಂ ಮತ್ತು ಅವರ ನಾಯಿ ಬೆಂಥೋ ಮನೆಯ ಹೊರಗಿದ್ದಾಗ ಈ ಘಟನೆ ಸಂಭವಿಸಿದೆ.
ಕಾಡಿನಿಂದ ಹೊರಬಂದ ಹುಲಿ ಅವರ ಜಮೀನಿಗೆ ನುಗ್ಗಿತ್ತು. ಹುಲಿ ದಾಳಿಯಿಂದ ಶಿವಂ ಭಯಭೀತರಾಗಿದ್ದು, ಆದರೆ ಅವರ ನಾಯಿ ಬೆಂಥೋ ಧೈರ್ಯದಿಂದ ಹುಲಿಯನ್ನು ಎದುರಿಸಿತು. ಬೆಂಥೋ ಜೋರಾಗಿ ಬೊಗಳುತ್ತಾ ಹುಲಿಯ ಗಮನವನ್ನು ಬೇರೆಡೆಗೆ ಸೆಳೆದಿದ್ದು, ಹುಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಬೆಂಥೋ ಹುಲಿಯ ಗಮನವನ್ನು ತನ್ನ ಕಡೆಗೆ ತಿರುಗಿಸಿದೆ.
ಹುಲಿ ಬೆಂಥೋನ ಕಡೆ ತಿರುಗಿದಾಗ ನಾಯಿ ಹುಲಿಯೊಂದಿಗೆ ತೀವ್ರವಾಗಿ ಹೋರಾಡಿತು. ಹುಲಿ ಬೆಂಥೋ ಮೇಲೆ ದಾಳಿ ಮಾಡಿ ಅದನ್ನು ತನ್ನ ದವಡೆಯಲ್ಲಿ ಕಚ್ಚಿ ಗ್ರಾಮದ ಹೊರಗೆ ಎಳೆದೊಯ್ದಿದ್ದು ಹುಲಿಯ ಕೋರೆಹಲ್ಲುಗಳು ನಾಯಿಯ ಕತ್ತಿಗೆ ಆಳವಾಗಿ ತಗುಲಿದ್ದವು ಮತ್ತು ಅದರ ಉಗುರುಗಳು ನಾಯಿಯನ್ನು ತೀವ್ರವಾಗಿ ಗಾಯಗೊಳಿಸಿದ್ದವು.
ಮರುದಿನ ಬೆಳಿಗ್ಗೆ ಶಿವಂ ಬೆಂಥೋನನ್ನು ತಮ್ಮ ಮನೆಯ ಬಾಗಿಲಲ್ಲಿ ಕಂಡಿದ್ದು, ತಕ್ಷಣ ಶಿವಂ ಬೆಂಥೋನನ್ನು ಪಶುವೈದ್ಯ ಅಖಿಲೇಶ್ ಸಿಂಗ್ ಅವರ ಬಳಿ ಕರೆದೊಯ್ದರು. “ದಯವಿಟ್ಟು ಅವನನ್ನು ಉಳಿಸಿ, ಅವನು ನನ್ನ ಜೀವ ಉಳಿಸಿದ್ದಾನೆ” ಎಂದು ಶಿವಂ ವೈದ್ಯರಲ್ಲಿ ಬೇಡಿಕೊಂಡಿದ್ದಾರೆ.
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಗಂಭೀರ ಗಾಯಗಳಿಂದಾಗಿ ಬೆಂಥೋ ಕೆಲವು ಗಂಟೆಗಳ ನಂತರ ಸಾವನ್ನಪ್ಪಿತು. ಬೆಂಥೋನ ಧೈರ್ಯದ ಕಾರ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪ್ರಾಣಿ ಪ್ರೇಮಿಗಳು ಕಣ್ಣೀರು ಹಾಕಿದ್ದಾರೆ. ಈ ಘಟನೆ ಫೆಬ್ರವರಿ 26 ರಂದು ನಡೆದಿದೆ.
વાઘના હુમલાથી માલિકને બચાવવા જર્મન શેફર્ડે આપ્યું જીવનું બલિદાન; મધ્યપ્રદેશનો હૃદયદ્રાવક કિસ્સો #Madhyapradesh #tigerattack #GermanShepherd #gujaratsamachar pic.twitter.com/wkzOIwSDny
— Gujarat Samachar (@gujratsamachar) March 1, 2025