ಬುಧವಾರ ರಸ್ತೆ ಅಪಘಾತದ ನಂತರ ಮೆದುಳು ಡೆಡ್ ಎಂದು ಘೋಷಿಸಲ್ಪಟ್ಟ 32 ವರ್ಷದ ವ್ಯಕ್ತಿಯಿಂದ ಹೃದಯ ಸ್ವೀಕರಿಸಿದ ನಂತರ ಬೆಳಗಾವಿಯ 36 ವರ್ಷದ ವ್ಯಕ್ತಿಯು ಹೊಸ ಜೀವನ ಪಡೆದುಕೊಂಡಿದ್ದಾರೆ.
ಅಣ್ಣಾಸಾಬ್ ಎಂಬುವರು ಡಿಲೇಟೆಡ್ ಕಾರ್ಡಿಯೊಮಿಯೋಪತಿಯಿಂದ ಬಳಲುತ್ತಿದ್ದು ಕಳೆದ ನಾಲ್ಕು ತಿಂಗಳಿಂದ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರೋಗಿಯ ಸ್ಥಿತಿ ಅಧ್ಯಯನ ಮಾಡಿದ ವೈದ್ಯರು ಹೃದಯ ಕಸಿ ಮಾಡಿಸುವಂತೆ ಕುಟುಂಬಕ್ಕೆ ಸಲಹೆ ನೀಡಿದ್ದರು. ಆ ಪ್ರಕಾರ ಕರ್ನಾಟಕ ಸರ್ಕಾರದ ಅಂಗಾಂಗ ಕಸಿ ಪ್ರಾಧಿಕಾರದಲ್ಲಿ ರೋಗಿಯ ಹೆಸರು ನೋಂದಾಯಿಸಲಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರನಿಗೆ ʼಪಿಂಚಣಿʼ ನೀಡುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ
ಇದೇ ವೇಳೆ ಅಪಘಾತಕ್ಕೆ ಒಳಗಾದ ಯುವಕನನ್ನು ಆರ್.ಆರ್. ನಗರದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆತನ ಬ್ರೈನ್ ಡೆಡ್ ಎಂದು ಘೋಷಿಸಿದ ನಂತರ, ಆತನ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬವು ಒಪ್ಪಿಗೆ ನೀಡಿತು.
ಬುಧವಾರ ರಾತ್ರಿ ಹೃದಯವನ್ನು ಸ್ಪರ್ಶ ಆಸ್ಪತ್ರೆಯಿಂದ ಹಸಿರು ಕಾರಿಡಾರ್ ಮೂಲಕ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಸಾಗಿಸಲಾಯಿತು. ಗುರುವಾರ ಸಂಜೆ ಸುರಿದ ಮಳೆ, ಸಂಚಾರ ದಟ್ಟಣೆಯ ನಡುವೆಯೂ ಅಂಗಾಂಗ ಸಾಗಿಸುವ ತಂಡವು 39 ನಿಮಿಷಗಳ ಅವಧಿಯಲ್ಲಿ 44 ಕಿ.ಮೀ ದೂರ ಕ್ರಮಿಸಿತು. ಬಳಿಕ ಹೃದಯ ಕಸಿ ಚಿಕಿತ್ಸೆ ನಡೆಸಲಾಗಿದೆ.