ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಬೆಳಿಗ್ಗೆ ಕನಿಷ್ಠ ಅರ್ಧ ಗಂಟೆ ಕಾಲ ನಿಧಾನವಾಗಿ ನಡೆಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.
ಅದರಲ್ಲೂ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದವರು ಆರು ತಿಂಗಳಿಗೂ ಹೆಚ್ಚಿನ ಕಾಲ ಬೆಳಗಿನ ವಾಕಿಂಗ್ ಮಾಡದಿದ್ದನ್ನು ಗಮನಿಸಿ ಬೆಳಗಿನ ವಾಕಿಂಗ್ ಮಾಡಿದವರಿಗೆ ಮಾತ್ರ ಅತ್ಯುತ್ತಮ ನಿದ್ದೆ ಬರುತ್ತದೆ ಎಂದು ಅಧ್ಯಯನ ಹೇಳಿದೆ.
45 ರಿಂದ 65 ವರ್ಷ ವಯಸ್ಸಿನೊಳಗಿನ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ವಾಕಿಂಗ್ ಹೋಗಲು ಸಾಧ್ಯವಾಗದಿದ್ದರೆ ಕನಿಷ್ಠ ಏರೋಬಿಕ್ ವ್ಯಾಯಾಮಗಳನ್ನಾದರೂ ಮಾಡುವುದರಿಂದ ನೀವು ರಾತ್ರಿ ವೇಳೆ ಅತ್ಯುತ್ತಮ ನಿದ್ದೆ ಪಡೆಯುತ್ತೀರಿ ಎಂದಿದೆ ಈ ಅಧ್ಯಯನ.
10 ವಾರಗಳ ಕಾಲ ಎರಡು ಗುಂಪುಗಳನ್ನು ರಚಿಸಿ ನಿದ್ದೆ ಮತ್ತು ಕೆಲಸದ ಬದಲಾವಣೆಯನ್ನು ಹೋಲಿಸಲಾಗಿದ್ದು ವ್ಯಾಯಾಮ ಮಾಡಿದ ತಂಡಕ್ಕೆ ಅತ್ಯುತ್ತಮ ನಿದ್ದೆ ಬಂದಿರುವುದಾಗಿ ಹೇಳಲಾಗಿದೆ.