ಲಕ್ನೋ : ಗೋರಖ್ಪುರ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಷಾದ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಅವರ ರಕ್ತದೊತ್ತಡ ಮತ್ತು ಹೃದಯದಲ್ಲಿ ಕೆಲವು ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ನಾವು ಅವಳನ್ನು ಲಕ್ನೋಗೆ ಕರೆದೊಯ್ಯುತ್ತಿದ್ದೇವೆ” ಎಂದು ಕಾಜಲ್ ಅವರ ಪತಿ ಸಂಜಯ್ ನಿಷಾದ್ ತಿಳಿಸಿದರು.
ಕಾಜಲ್ ನಿಷಾದ್ (41) ಅವರು ನಟ ಮತ್ತು ಹಾಲಿ ಬಿಜೆಪಿ ಸಂಸದ ರವಿ ಕಿಶನ್ ಶುಕ್ಲಾ ವಿರುದ್ಧ ಗೋರಖ್ಪುರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಕಾಜಲ್ ಜನಪ್ರಿಯ ಟಿವಿ ನಟಿ ಕೂಡ ಹೌದು.