ತಪಾಸಣೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ಹೃದ್ರೋಗ ತಜ್ಞರ ಮುಂದೆ ಕುಳಿತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದು, ತಕ್ಷಣವೇ ಇದನ್ನು ಗುರುತಿಸಿದ ವೈದ್ಯರು ಸಿಪಿಆರ್ ಮಾಡುವ ಮೂಲಕ ಆತನ ಪ್ರಾಣವನ್ನು ಉಳಿಸಿದ್ದಾರೆ.
ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದ್ದು, ಅಲ್ಲಿನ ಪ್ರಖ್ಯಾತ ಹೃದ್ರೊಗ ತಜ್ಞ ಅರ್ಜುನ್ ಅದ್ನಾಯಕ್ ಬಳಿ ತಪಾಸಣೆಗಾಗಿ ವ್ಯಕ್ತಿಯೊಬ್ಬರು ಬಂದಿದ್ದರು.
ಇದೇ ಸಂದರ್ಭದಲ್ಲಿ ರೋಗಿ ಜೊತೆ ಬಂದಿದ್ದವರೊಂದಿಗೆ ವೈದ್ಯ ಅರ್ಜುನ್ ಮಾತನಾಡುತ್ತಿದ್ದಾಗ ರೋಗಿ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ.
ಇದನ್ನು ಗಮನಿಸಿದ ವೈದ್ಯರು ತಕ್ಷಣವೇ ಧಾವಿಸಿ ಅವರಿಗೆ ಸಿಪಿಆರ್ ಮಾಡಿದ್ದಾರೆ. ಇದರ ಪರಿಣಾಮ ರೋಗಿ ಚೇತರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ಸಂಸದ ಧನಂಜಯ್ ಟ್ವೀಟ್ ಮಾಡಿದ್ದು ವೈದ್ಯರ ಕಾರ್ಯವನ್ನು ಶ್ಲಾಘಿಸಿದ್ದಾರೆ.