ಮಂಗಳೂರು: ಹೃದಯಾಘಾತದಿಂದ 24 ವರ್ಷದ ಯುವಕ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ನಲ್ಲಿ ನಡೆದಿದೆ.
ಸುರತ್ಕಲ್ ಕಾಂಗ್ರೆಸ್ ಮುಖಂಡ ಕೃಷ್ಣಾಪುರ ನಿವಾಸಿ ಮಂಗಳೂರು ಬಾವ ಅವರ ಪುತ್ರ ಮುಹಮ್ಮದ್ ಆಸಿಫ್(24) ಹೃದಯಾಘಾತದಿಂದ ಮೃತಪಟ್ಟವರು. ಗುರುವಾರ ಮನೆಯಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ಬೆನ್ನು, ಕೈಕಾಲು ನೋವಾಗುತ್ತಿದೆ ಎಂದು ಅವರು ಮನೆಯವರಿಗೆ ಹೇಳಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಈ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.