ಮಂಗಳೂರು: ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯರು(58) ನಿಧನರಾಗಿದ್ದಾರೆ. ರಂಗಸ್ಥಳದಲ್ಲೇ ಹೃದಯಘಾತದಿಂದ ಕುಸಿದು ಬಿದ್ದು ಗುರುವಪ್ಪ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಬಳಿ ಘಟನೆ ನಡೆದಿದೆ. ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷ ಯಕ್ಷಗಾನ ಆಯೋಜಿಸಲಾಗಿತ್ತು. ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಕಲಾವಿದ ಗುರುವಪ್ಪ ನಿಧನರಾಗಿದ್ದಾರೆ.