alex Certify BIG NEWS: ಭಾರತದ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

ಭೋಪಾಲ್: ಪ್ಲಾಸ್ಟಿಕ್ ಅಥವಾ ಲೋಹಗಳಿಂದ ತಯಾರಿಸಿದ ವಿವಿಧ ಬಗೆಯ ವಿನ್ಯಾಸದ ಗಡಿಯಾರಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ, ಮಳಿಗೆಗಳಲ್ಲಿ ನೋಡಬಹುದಾಗಿದೆ. ಆದರೆ, ಭಾರತದಲ್ಲಿ ಹಸುವಿನ ಸಗಣಿಯಿಂದ ತಯಾರಾಗುವ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸುವ ಸಗಣಿ ಗಡಿಯಾರಗಳಿಗೆ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ನಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ವಿಚಾರ ಸಮಿತಿ ಎನ್ನುವ ಸಂಸ್ಥೆಯು ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ. ಮಹಿಳಾ ಸಬಲೀಕರಣ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಸಗಣಿಯ ಗಡಿಯಾರಗಳನ್ನು ತಯಾರಿಸುತ್ತಿದ್ದು, ಸುಮಾರು 750 ಮಹಿಳೆಯರು ಇಂತಹ ಗಡಿಯಾರಗಳನ್ನು ಸಿದ್ಧಪಡಿಸುತ್ತಾರೆ. ಇವುಗಳ ಜೊತೆಗೆ ವಿವಿಧ ವಿಗ್ರಹಗಳು, ಚಿಹ್ನೆಗಳು, ದೀಪ ಸ್ತಂಭಗಳು, ಅಲಂಕಾರಿಕ ಮಾಲೆಗಳನ್ನು ಕೂಡ ತಯಾರಿಸುತ್ತಾರೆ. ಇಂತಹ ವಸ್ತುಗಳಲ್ಲಿ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ದೀಪಾವಳಿಗೆ ಮುಂಚಿತವಾಗಿ, ಈ ಮಹಿಳೆಯರ ಗುಂಪು ಸರಿಸುಮಾರು 5,000 ಹಸುವಿನ ಸಗಣಿ ಗಡಿಯಾರಗಳನ್ನು ತಯಾರಿಸಿತು, ಪೂರೈಕೆಯು ಈಗಾಗಲೇ ಬೇಡಿಕೆಯ 90% ಅನ್ನು ಪೂರೈಸಿದೆ. ಖರೀದಿದಾರರು ಈ ಗೋಡೆ ಗಡಿಯಾರಗಳ ಅತ್ಯುತ್ತಮ ಫಿನಿಶಿಂಗ್ ಮತ್ತು ಪುರಾತನ ವಿನ್ಯಾಸಗಳನ್ನು ಶ್ಲಾಘಿಸಿದ್ದಾರೆ, ಇದು ಬಜೆಟ್ ಸ್ನೇಹಿ ಮತ್ತು ಪರಿಸರಕ್ಕೆ ಸ್ನೇಹಿಯಾಗಿದೆ.

ಉತ್ಪನ್ನಗಳಲ್ಲಿ, ಗೋಡೆ ಗಡಿಯಾರಗಳು ಹೆಚ್ಚು ಬೇಡಿಕೆಯಿರುವ ವಸ್ತುಗಳಾಗಿದ್ದು, ಪ್ರತಿಯೊಂದಕ್ಕೆ 200 ರೂ.ನಿಂದ 1,500 ರೂ. ದರ ಇದೆ.

ವಿಚಾರ ಸಮಿತಿಯ ಕಾರ್ಯಾಧ್ಯಕ್ಷೆ ಸುನಿತಾ ಜೈನ್ ಅರಿಹಂತ್ ಮಾತನಾಡಿ, ವಿಗ್ರಹಗಳು, ‘ಶುಭ ಲಾಭ’ ಚಿಹ್ನೆಗಳು, ದೀಪಗಳು, ಹೂಮಾಲೆಗಳು ಮತ್ತು ಗುರಾಣಿಗಳು ಸೇರಿದಂತೆ ಹಸುವಿನ ಸಗಣಿಯಿಂದ ಹಲವಾರು ವಸ್ತುಗಳನ್ನು ರಚಿಸಿದ್ದಾರೆ. ಸಮಿತಿಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ಮಹಿಳೆ ಸ್ವಾವಲಂಬನೆಯತ್ತ ಮುನ್ನಡೆಯುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...