ತುಮಕೂರು: ಎರಡು ದಿನಗಳ ಹಿಂದೆಯಷ್ಟೇ ತುಮಕೂರು ಜಿಲ್ಲೆಯಲ್ಲಿ ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿ ಮೃತಪಟ್ಟ ಪ್ರಕರಣ ಮಾಸುವ ಮೊದಲೇ ಪಾವಗಢದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪಾವಗಡದ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಮೈಥಿಲಿ(19) ಮೃತಪಟ್ಟವರು. ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ ಶನಿವಾರ ತರಗತಿ ಮುಗಿಸಿ ಪಟ್ಟಣದ ನಿಲ್ದಾಣಕ್ಕೆ ಬರುವಾಗ ಚಳ್ಳಕೆರೆ ಕ್ರಾಸ್ ಬಳಿ ಸುಸ್ತಾಗಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಂಬುಲೆನ್ಸ್ ನಲ್ಲಿ ಪಾವಗಡದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೈಥಿಲಿ ಅವರ ಅಕಾಲಿಕ ನಿಧನಕ್ಕೆ ಸಹಪಾಠಿಗಳು, ಸ್ನೇಹಿತರು, ಅಧ್ಯಾಪಕರು ಕಂಬನಿ ನಡೆದಿದ್ದಾರೆ.