ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು. ಮೆಂತೆ ಹಾಗೂ ಪನ್ನೀರ್ ಎರಡೂ ಆರೋಗ್ಯಕರವಾದ ಆಹಾರವಾಗಿದ್ದು, ಇವೆರಡನ್ನು ಮಿಕ್ಸ್ ಮಾಡಿ ಮಾಡುವ ಪಲ್ಯದ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಪನ್ನೀರ್ – 200 ಗ್ರಾಂ
ಟೊಮೆಟೊ – 2
ಜೀರಿಗೆ – ಅರ್ಧ ಚಮಚ
ಖಾರದ ಪುಡಿ – ಅರ್ಧ ಚಮಚ
ಗರಂ ಮಸಾಲೆ ಪುಡಿ – ಅರ್ಧ ಚಮಚ
ಎಣ್ಣೆ – 3 ಚಮಚ
ಮೆಂತೆ – 500 ಗ್ರಾಂ
ಶುಂಠಿ – ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿಣ ಪುಡಿ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಮಾಡುವ ವಿಧಾನ
ಮೆಂತೆ ಸೊಪ್ಪನ್ನು ಶುಚಿ ಮಾಡಿ, ತೊಳೆದು ಕತ್ತರಿಸಿ. ನಂತರ ಪನ್ನೀರ್ ಅನ್ನು ಕ್ಯೂಬ್ ರೀತಿಯಲ್ಲಿ ಕತ್ತರಿಸಿಡಿ.
ಈಗ ಪಾತ್ರೆಯನ್ನು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ. ನಂತರ ಶುಂಠಿ ಮತ್ತು ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ. ಈಗ ಖಾರದಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಈಗ ಪನ್ನೀರ್ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ಮೆಂತೆ ಸೊಪ್ಪು ಹಾಕಿ 5-7 ನಿಮಿಷ ಫ್ರೈ ಮಾಡಿದರೆ ಮೆಂತೆ-ಪನ್ನೀರ್ ಪಲ್ಯ ರೆಡಿ. ರೊಟ್ಟಿ ಹಾಗೂ ಚಪಾತಿ ಜೊತೆ ಈ ಪಲ್ಯ ಸವಿದರೆ ಮಜವಾಗಿರುತ್ತದೆ.