ಕೆಲ ಮಕ್ಕಳು ಡ್ರೈ ಫ್ರೂಟ್ಸ್ ತಿನ್ನಲು ಇಷ್ಟಪಡುವುದಿಲ್ಲ. ಅದರೆ ತಾಯಂದಿರಿಗೆ ಪೋಷಕಾಂಷಗಳನ್ನು ಹೊಂದಿರುವ ಡ್ರೈ ಫ್ರೂಟ್ಸ್ ಗಳನ್ನು ಮಕ್ಕಳಿಗೆ ತಿನ್ನಿಸಿ ಶಕ್ತಿ ತುಂಬುವ ಉತ್ಸಾಹ. ಇದಕ್ಕೆ ಇಲ್ಲಿದೆ ಒಂದು ಉಪಾಯ.
ಈ ಎಲ್ಲಾ ಡ್ರೈ ಫ್ರೂಟ್ಸ್ ಬಳಸಿ ನೀವು ರೈಸ್ ಬಾತ್ ತಯಾರಿಸಬಹುದಾಗಿದ್ದು, ಇದನ್ನು ಮಕ್ಕಳು ಖುಷಿಯಿಂದ ಸವಿಯುತ್ತಾರೆ.
ಬೇಕಾಗುವ ವಸ್ತುಗಳು: 2 ಕಪ್ ಅಕ್ಕಿ, 10 ಬಾದಾಮಿ, 10 ಗೋಡಂಬಿ, 10 ಒಣದ್ರಾಕ್ಷಿ , 2 ಚಮಚ ತುಪ್ಪ, ದಾಲ್ಚಿನ್ನಿ ಎಲೆ, ಕಾಳುಮೆಣಸು, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬಾಣಲೆಗೆ ತುಪ್ಪ ಹಾಕಿ ತುಪ್ಪ ಕರಗುತಿದ್ದಂತೆ ದಾಲ್ಚಿನ್ನಿ, ಕಾಳು ಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಕೆಂಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಇದಕ್ಕೆ ಅಕ್ಕಿ ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಉಪ್ಪು, ನೀರು ಸೇರಿಸಿ ಉರಿಯನ್ನು ಚಿಕ್ಕದಾಗಿಸಿ ಬಾಣಲೆಗೆ ಮುಚ್ಚಿ. ಹಬೆಯಲ್ಲಿ ಅನ್ನ ಉದುರು ಉದುರಾಗುವವರೆಗೂ ಬೇಯಿಸಿ. ಸಿದ್ದವಾದ ಇದನ್ನು ಸೌತೆಕಾಯಿ ರಾಯತದೊಂದಿಗೆ ಸವಿಯಬಹುದು.