ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಎಲ್ಲೆಡೆ ಮಂಕುಬಡಿದ ವಾತಾವರಣವಿದ್ದು, ದೇಶದ ಎಲ್ಲಾ ರಾಜ್ಯಗಳಲ್ಲೂ ಈ ವೈರಾಣುವಿನಿಂದ ಜನರು ಹೈರಾಣಾಗಿದ್ದಾರೆ. ಇವೆಲ್ಲದರ ನಡುವೆಯೇ ಕೋವಿಡ್ ಸೋಂಕಿತರ ಮೂಡ್ ಲಿಫ್ಟ್ ಮಾಡಲು ವೈದ್ಯರು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಮುಂಬೈನ ಗೋರೆಗಾವ್‌ನ ನೆಸ್ಕೋ ಕೋವಿಡ್ ಕೇಂದ್ರವೊಂದರಲ್ಲಿ ಇಂಥದ್ದೇ ಘಟನೆ ಜರುಗಿದ್ದು, ಮರಾಠಿ ಹಾಡು ಜಿಂಗಾತ್‌ಗೆ ಆರೋಗ್ಯ ಸೇವಾ ಕಾರ್ಯಕರ್ತರು ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಜೂನ್ 2ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಕೇಂದ್ರ ತೆರೆದು ಒಂದು ವರ್ಷ ತುಂಬಿದ ಪ್ರಯುಕ್ತ ಆರೋಗ್ಯ ಸೇವಾ ಕಾರ್ಯಕರ್ತರು ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ಹಾಡುಗಳಿಗೆ ವೈದ್ಯರು ಆಸ್ಪತ್ರೆಗಳಲ್ಲಿ ಸ್ಟೆಪ್ ಹಾಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈದ್ಯರು ಹಾಗೂ ನರ್ಸ್‌ಗಳು ಪಿಪಿಇ ಕಿಟ್‌ಗಳಲ್ಲೇ ಮರಾಠಿ ಸಿನಿಮಾ ’ಸೈರಾತ್’ನ ಜಿಂಗಾತ್ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ.