alex Certify ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

 

ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ ಮಾಡಿದ ನಂತ್ರವೂ ಹಸಿವು ಇಂಗುತ್ತಿಲ್ಲ ಎಂದಾದ್ರೆ ಎಚ್ಚರಿಕೆಯಿಂದ ಇರಿ. ನಿಮ್ಮ ಈ ಹಸಿವು ನಿಮ್ಮ ಅನಾರೋಗ್ಯವನ್ನು ಸೂಚಿಸುತ್ತದೆ. ಪದೇ ಪದೇ ಹಸಿವಾಗಲು ಹಾಗೂ ನೀವು ಎಷ್ಟೇ ಆಹಾರ ಸೇವನೆ ಮಾಡಿದ್ರೂ ಹೊಟ್ಟೆ ತುಂಬುವ ಅನುಭವ ಆಗಿಲ್ಲ ಎಂದಾದ್ರೆ ಇದು ಈ ಕೆಳಗಿನ ಸಮಸ್ಯೆಯ ಮುನ್ಸೂಚನೆಯಾಗಿದೆ.

ಪ್ರೋಟೀನ್ ಕೊರತೆ :  ಆಹಾರದಲ್ಲಿ ಕಡಿಮೆ ಪ್ರೋಟೀನ್ ಇದ್ದರೆ ಆಗ  ಹಸಿವು ಹೆಚ್ಚಾಗುತ್ತದೆ. ಪ್ರೋಟೀನ್ ಶಕ್ತಿ ನೀಡುವ ಜೊತೆಗೆ ಹಸಿವನ್ನು ಹೆಚ್ಚಿಸುವ ಹಾರ್ಮೋನ್‌ ನಿಯಂತ್ರಿಸುತ್ತದೆ. ಅದೇ ಪ್ರೋಟೀನ್‌ ದೇಹದಲ್ಲಿ ಕಡಿಮೆ ಆದಾಗ ಹಸಿವು ಹೆಚ್ಚಾಗುತ್ತದೆ.

ನಿದ್ರಾಹೀನತೆ : ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂದಾದ್ರೆ ನಿಮಗೆ ಪದೇ ಪದೇ ಹಸಿವಾಗೋದು ಹೆಚ್ಚು. ಪ್ರತಿ ದಿನ ಆರರಿಂದ ಏಳು ಗಂಟೆ ಸರಿಯಾಗಿ ನಿದ್ರೆ ಮಾಡಿದ್ರೆ ಈ ಹಸಿವಿನ ಸಮಸ್ಯೆ ಕಡಿಮೆ ಆಗುತ್ತದೆ.

ಫೈಬರ್‌ ಸಮಸ್ಯೆ : ನಿಮ್ಮ ದೇಹದಲ್ಲಿ ಸಾಕಷ್ಟು ಫೈಬರ್ ಇಲ್ಲದಿದ್ದಾಗ   ಹಸಿವು ಕಾಡುತ್ತದೆ. ಫೈಬರ್‌ ನಿಂದ ಕೂಡಿರುವ ಆಹಾರ ಹಸಿವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಆಗ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಒತ್ತಡ : ಅತಿಯಾದ ಒತ್ತಡ ಕೂಡ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ಒತ್ತಡ ಹೆಚ್ಚಾದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತದೆ. ಇದು ಆಗಾಗ್ಗೆ ಹಸಿವನ್ನು ಉಂಟುಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...