ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಮೂರನೇ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಹಾಗಾದರೆ ಸೋಂಕಿತರಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳು ಏನು? ಅದಕ್ಕೆ ಸೂಕ್ತ ಔಷಧಿ ಯಾವುದು ಎಂಬ ಬಗ್ಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಮೂರನೇ ಅಲೆಯಲ್ಲಿ ಕೊರೊನಾ ವೈರಸ್ ಸಾಮಾನ್ಯ ವೈರಸ್ ಆಗಿ ಕನ್ವರ್ಟ್ ಆಗಿದ್ದು, ಇದು ಹೆಚ್ಚು ಸಾವು-ನೋವಿಗೆ ಕಾರಣವಾಗಲ್ಲ. ಮೂರನೇ ಅಲೆಯಲ್ಲಿ ಇನ್ ಫೆಕ್ಷನ್ ವ್ಯಾಪಕವಾಗಿ ಹರಡಿ ಬಳಿಕ ಕಡಿಮೆಯಾಗುತ್ತೆ. ರೋಗಿಗಳಲ್ಲಿ ಜ್ವರ, ಮೈ-ಕೈ ನೋವು, ಗಂಟಲು ನೋವು, ನೆಗಡಿ, ಕೆಮ್ಮು, ಗಂಟಲು ಕೆರತ ಹಾಗೂ ಹಸಿವು ಕಡಿಮೆಯಾಗುವುದು, ಅತಿಯಾದ ಸುಸ್ತು ಕಂಡು ಬರುತ್ತದೆ. ಮಕ್ಕಳಲ್ಲಿ ಜ್ವರ, ವಾಂತಿ, ಊಟ ಸೇರದಿರುವುದು, ಅತಿ ಕೆಮ್ಮಿನಂತಹ ಲಕ್ಷಣ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
ಜ್ವರ 2-3 ದಿನಗಳಲ್ಲಿ ಕಡಿಮೆಯಾದರೂ ಕೆಮ್ಮು ಮಾತ್ರ ಬೇಗನೇ ಕಡಿಮೆಯಾಗಲ್ಲ. ಮೂಗು ಹಾಗೂ ಗಂಟಲಿನಲ್ಲಿ ಹೆಚ್ಚು ಇನ್ ಫೆಕ್ಷನ್ ಕಂಡುಬರುತ್ತದೆ. ಸೋಂಕಿತ ವ್ಯಕ್ತಿಯ ಉಸಿರಾಟ ಹಾಗೂ ಕೆಮ್ಮಿನಿಂದಲೇ ವೈರಸ್ ರ್ಯಾಪಿಡ್ ಆಗಿ ಹರಡುತ್ತದೆ. ಕೆಮ್ಮಿಗೆ ಅಗತ್ಯ ಔಷಧದ ಜತೆಗೆ ಬೆಚ್ಚಗಿನ ನೀರು, ಸ್ಟೀಮ್, ಕಷಾಯ ಸೇವನೆ ಮಾಡುವುದರಿಂದ ಬೇಗನೇ ಗುಣಮುಖವಾಗಬಹುದು ಎಂದು ತಿಳಿಸಿದ್ದಾರೆ.
ಮೂರನೇ ಅಲೆಯಲ್ಲಿ ಗಂಟಲು ಇನ್ ಫೆಕ್ಷನ್ ಹಾಗೂ ಕೆಮ್ಮಿನ ಲಕ್ಷಣಗಳು ಹೇಗೆ ಮನೆ ಮಂದಿಗೆಲ್ಲ ಹರಡಲು ಕಾರಣವಾಗುತ್ತದೆ ಎಂಬುದನ್ನು ಕೂಡ ವಿವರಿಸಿರುವ ಡಾ.ರಾಜು ಹಾಗೂ ಸಾಂಕ್ರಾಮಿಕ ರೋಗವನ್ನು ಪ್ರಕೃತಿ ಮೂಲಕವೇ ಹೇಗೆ ವಾಸಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಸಲಹೆ ನೀಡಿದ್ದಾರೆ. ಕೋವಿಡ್ ಮೂರನೇ ಅಲೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಯಾವೆಲ್ಲ ಸಿಂಪಲ್ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಡಾ.ರಾಜು ಅವರ ಈ ಹೊಸ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://youtu.be/oTW6O3ZEOSo