ಕೀಟೋ ಅಥವಾ ವೆಗನ್ ಡಯಟ್ ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅನೇಕರು ಈ ಡಯಟ್ ಪಾಲಿಸ್ತಿದ್ದಾರೆ. ಮತ್ತೆ ಕೆಲವರಿಗೆ ಇದ್ರಲ್ಲಿ ಯಾವುದು ಬೆಸ್ಟ್, ಇದು ಆರೋಗ್ಯ ಹಾಳು ಮಾಡುತ್ತಾ ಎಂಬೆಲ್ಲ ಪ್ರಶ್ನೆಗಳಿವೆ. ಇತ್ತೀಚಿಗೆ ಈ ಡಯಟ್ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಅದು ಒಳ್ಳೆ ಸುದ್ದಿಯನ್ನು ನೀಡಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿದ ಹೊಸ ಅಧ್ಯಯನದ ಪ್ರಕಾರ, ಕೀಟೋ ಡಯಟ್ ಹಾಗೂ ವೆಗನ್ ಡಯಟ್, ಜನರ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ. ಭಯಪಡಬೇಕಾಗಿಲ್ಲ, ಈ ಡಯಟ್ ಮಾಡುವ ಜನರ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.
ರಾಷ್ಟ್ರೀಯ ಆರೋಗ್ಯ ಸಂಸ್ಥೆ ಫಲಿತಾಂಶವನ್ನು ನೇಚರ್ ಮೆಡಿಸಿನ್ ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದೆ. 20 ಜನರ ಸಣ್ಣ ಗುಂಪಿನ ಮೇಲೆ ಅಧ್ಯಯನ ನಡೆದಿದೆ. ಒಂದು ತಿಂಗಳು ಅಧ್ಯಯನ ನಡೆಸಲಾಗಿದೆ. ಮೊದಲು ಕೀಟೊ ಹಾಗೂ ವೆಗನ್ ಡಯಟ್ ಪಾಲನೆ ಮಾಡಲು ಹೇಳಲಾಗಿದೆ. ನಂತ್ರ ಸಾಮಾನ್ಯ ಡಯಟ್ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ಎರಡೂ ಅವಧಿಯಲ್ಲಿ ಅವರ ದೇಹದಲ್ಲಾದ ಬದಲಾವಣೆ ಪರೀಕ್ಷೆ ಮಾಡಲಾಗಿದೆ.
ಚಯಾಪಚಯ ಬದಲಾವಣೆಗಳು, ಮೈಕ್ರೋಬಯೋಟಾ, ಕರುಳಿನ ಬ್ಯಾಕ್ಟೀರಿಯಾ ಇತ್ಯಾದಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಕೀಟೋದಲ್ಲಿ ಹೊಂದಾಣಿಕೆಗೆ ಪ್ರತಿರಕ್ಷಣಾ ವ್ಯವಸ್ಥೆ ಪ್ರಕ್ರಿಯೆ ಕಂಡು ಬಂದ್ರೆ, ವೆಗನ್ ನಲ್ಲಿ ಸಾಮಾನ್ಯ ಪ್ರತಿರಕ್ಷಣಾ ವ್ಯವಸ್ಥೆ ಪ್ರಕ್ರಿಯೆ ಕಂಡು ಬಂದಿದೆ.