ನವದೆಹಲಿ: ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗೆ ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಅಧೀನದಲ್ಲಿ ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ ಔಷಧವನ್ನು ಮಾತ್ರ ಬಳಸಲು ತಿಳಿಸಲಾಗಿದೆ.
ಸಾಧಾರಣ ಕೊರೊನಾ ಲಕ್ಷಣ ಇರುವ ರೋಗಿಗಳಿಗೆ ಪ್ಯಾರಸಿಟಮಾಲ್, ಕಫ್ ಸಿರಪ್ ಮಾತ್ರ ಕೊಡಬೇಕು. ಇದನ್ನು ಹೊರತುಪಡಿಸಿ ಬೇರೆ ಯಾವ ಔಷಧ ನೀಡುವಂತಿಲ್ಲ. ಹೆಚ್.ಸಿ.ಕ್ಯೂ. ಮಾತ್ರೆ, ಫವಿಪಿರವಿರ್, ಐವರ ಮೆಕ್ಟಿನ್ ಜಿಂಕ್, ಡೊಕ್ಸಿಸೈಕ್ಲೇನಿ, ಪ್ಲಾಸ್ಮಾ ಥೆರಪಿ ನೀಡದಂತೆ ಸೂಚನೆ ನೀಡಲಾಗಿದೆ.
ಸಾಧಾರಣ ಸೋಂಕಿತರಿಗೆ ಕೊಮಾರ್ಬಿಡಿಟಿ ನಿಯಂತ್ರಿಸಬೇಕು. ಆಕ್ಸಿಜನ್ ನೀಡಿ ಕೊಮಾರ್ಬಿಡಿಟಿ ನಿಯಂತ್ರಿಸಬೇಕು. ಆದರೆ 2 –DG ಬಳಕೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಿಲ್ಲ. ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿದ್ದರೆ ಆಮ್ಲಜನಕ, ಸ್ಟಿರಾಯ್ಡ್, ಟೊಸಿಲಿಜುಂಬ್ ಕೂಡ ನೀಡಬೇಕು.ಜೊತೆಗೆ ಆಸ್ಪತ್ರೆಗೆ ಸಮಿತಿ ಸೋಂಕು ನಿಯಂತ್ರಣ ಸಮಿತಿ ನೇಮಕದ ಅಗತ್ಯವಿದೆ ಎಂದು ಹೇಳಲಾಗಿದೆ.
HRCT ಅನಗತ್ಯವಾಗಿ, ತರ್ಕರಹಿತವಾಗಿ ಮಾಡಬಾರದು. ಬಾರಿ ಎಚ್ಚರಿಕೆಯಿಂದ HRCT ಮಾಡಿಸಬೇಕು. ಇನ್ನು ರೆಮ್ ಡೆಸಿವಿರ್ ಪ್ರಯೋಗಾತ್ಮಕ ಡ್ರಗ್ಸ್ ಮಾತ್ರ. ಹೀಗಾಗಿ ಆರ್ಡರ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ರೆಮ್ ಡೆಸಿವಿರ್ ಇಂಜೆಕ್ಷನ್ ನಿಂದ ಹಾನಿ ಸಂಭವಿಸಬಹುದು. ಹೈಪೊಕ್ಸಿ ರೋಗಿಗಳಿಗೆ ಮಾತ್ರ ಡೆಕ್ಸಾ ಮಾತ್ರೆಯನ್ನು 10 ದಿನ ಕೊಡಬೇಕು. ದಿನಕ್ಕೆ 6 ಎಂಜಿಯಂತೆ 10 ದಿನ ಮಾತ್ರ ನೀಡಬೇಕು ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯದ ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ.