
ನವದೆಹಲಿ: ಇಯರ್ ಫೋನ್ ಮತ್ತು ಹೆಡ್ ಫೋನ್ ಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ಜನರಲ್ಲಿ ಶ್ರವಣದೋಷ ಉಂಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈ ರೀತಿ ಇಯರ್ ಫೋನ್ ಮತ್ತು ಹೆಡ್ ಫೋನ್ ಗಳ ಅತಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಆಡಿಯೋ ಸಾಧನಗಳ ಬಳಕೆ ಯುವಕರಲ್ಲಿ ಅತಿಯಾಗಿದೆ. 50 ಡೆಸಿಬಲ್ ಗಳಿಗೆ ಹಾಗೂ ದಿನಕ್ಕೆ ಎರಡು ಗಂಟೆ ಮೀರದಂತೆ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಸಬೇಕು. ಬಳಸುವಾಗ ಆಗಾಗ ವಿರಾಮ ತೆಗೆದುಕೊಳ್ಳಬೇಕು ಎನ್ನಲಾಗಿದೆ.
ಮಕ್ಕಳು ನಿರಂತರವಾಗಿ ಮೊಬೈಲ್ ಟಿವಿ ನೋಡುವುದರಿಂದ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ದೀರ್ಘಕಾಲದ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.