alex Certify ‌ʼಕೊರೊನಾʼ ಲಸಿಕೆ ಪಡೆದವರಿಗೆ ಬಿಗ್​ ರಿಲೀಫ್: ಅಂತರ್ ರಾಜ್ಯ ಪ್ರಯಾಣದ ಬಗ್ಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕೊರೊನಾʼ ಲಸಿಕೆ ಪಡೆದವರಿಗೆ ಬಿಗ್​ ರಿಲೀಫ್: ಅಂತರ್ ರಾಜ್ಯ ಪ್ರಯಾಣದ ಬಗ್ಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್

ಕೊರೊನಾದ 2ನೇ ಡೋಸ್​ ಲಸಿಕೆಯನ್ನು ಸ್ವೀಕರಿಸಿ 15 ದಿನ ಕಳೆದಿರುವ ಲಕ್ಷಣ ರಹಿತ ವ್ಯಕ್ತಿಗಳಿಂದ ನೆಗೆಟಿವ್​ ಆರ್ ​ಟಿ ಪಿಸಿಆರ್​ ವರದಿ ತರುವಂತೆ ಸೂಚನೆ ನೀಡುವುದು ಬೇಡ ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

2 ಡೋಸ್​ ಲಸಿಕೆಗಳನ್ನು ಸ್ವೀಕರಿಸಿ 15 ದಿನಗಳನ್ನು ಕಳೆದ ಲಕ್ಷಣ ರಹಿತ ವ್ಯಕ್ತಿಗಳು ಯಾವುದೇ ರಾಜ್ಯಕ್ಕೆ ಪ್ರವೇಶ ಪಡೆಯುವ ಮುನ್ನ ಸಲ್ಲಿಸಬೇಕಾದ ಆರ್ ​ಟಿ ಪಿಸಿಆರ್​ ನೆಗೆಟಿವ್​ ವರದಿಯಿಂದ ವಿನಾಯಿತಿ ಪಡೆಯಬಹುದು ಎಂದು ಹೊಸ ಮಾರ್ಗಸೂಚಿಯ ಮೂಲಕ ಕೇಂದ್ರ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.

ಆದರೆ ಇವರು ತಮ್ಮ ಕೊನೆಯ ಡೋಸ್​ ಲಸಿಕೆಯನ್ನು ಪಡೆದ ಪ್ರಮಾಣ ಪತ್ರವನ್ನು ಕೋವಿನ್ ಅಪ್ಲಿಕೇಶನ್​ ಮೂಲಕ ಹೊಂದಿರಬೇಕು. ಈ ಪ್ರಮಾಣಪತ್ರವನ್ನು ಹೊಂದಿದ್ದಲ್ಲಿ ಅವರು ವಿಮಾನ, ರೈಲ್ವೆ , ಸಾರಿಗೆ ಹಾಗೂ ಜಲ ಮಾರ್ಗದಲ್ಲಿ ಸಂಚರಿಸಬಹುದಾಗಿದೆ ಎಂದು ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.

BIG BREAKING: ಹೆಚ್ಚಿದ ಕೊರೊನಾ 3ನೇ ಅಲೆ ಆತಂಕ; ಸೋಂಕಿತರ ಸಂಖ್ಯೆಯಲ್ಲಿ ದಿಡೀರ್ ಏರಿಕೆ; ಒಂದೇ ದಿನದಲ್ಲಿ ಮಹಾಮಾರಿಗೆ 607 ಜನ ಬಲಿ

ಜಾರ್ಖಂಡ್​, ಛತ್ತೀಸಗಢ, ತ್ರಿಪುರದಂತಹ ರಾಜ್ಯಗಳಲ್ಲಿ ಆರ್ ​ಟಿ ಪಿಸಿಆರ್​​ ಟೆಸ್ಟ್​ ವರದಿ ಕಡ್ಡಾಯವಾಗಿದೆ. ಇನ್ನು ಪಶ್ಚಿಮ ಬಂಗಾಳ, ಗುಜರಾತ್​, ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಪ್ರಯಾಣಿಕರು ಯಾವ ರಾಜ್ಯದಿಂದ ಬಂದಿದ್ದಾರೆ ಅನ್ನೋದನ್ನೂ ಪರಿಗಣಿಸಲಾಗುತ್ತಿತ್ತು. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಈ ಹೊಸ ಸೂಚನೆಯನ್ನು ಹೊರಡಿಸಿದೆ.

ಮಹಾರಾಷ್ಟ್ರ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಎಂಟ್ರಿ ಕೊಡುವವರು 72 ಗಂಟೆಯೊಳಗಿನ ನೆಗೆಟಿವ್​ ವರದಿಯನ್ನು ಹೊಂದಿರಬೇಕು. ಪಶ್ಚಿಮ ಬಂಗಾಳಕ್ಕೆ ಎಂಟ್ರಿ ಕೊಡುವ ಪುಣೆ, ಮುಂಬೈ ಹಾಗೂ ಚೆನ್ನೈ ವಾಸಿಗಳಿಗೂ ಇದೇ ಷರತ್ತನ್ನು ವಿಧಿಸಲಾಗಿದೆ.

ಉತ್ತರ ಪ್ರದೇಶದ ಕಾನ್ಪುರಕ್ಕೆ ದೇಶದ ಯಾವುದೇ ಮೂಲೆಯಿಂದ ಎಂಟ್ರಿ ಕೊಡುವ ಪ್ರಯಾಣಿಕರು ನೆಗೆಟಿವ್​ ವರದಿ ನೀಡುವುದು ಕಡ್ಡಾಯವಾಗಿದೆ. ವಾರಣಾಸಿಯಲ್ಲಿ ಇಂತಹ ಯಾವುದೇ ಷರತ್ತಿಲ್ಲ. ಇತ್ತ ಆಂಧ್ರ ಪ್ರದೇಶ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಓಡಿಶಾ ಹಾಗೂ ತೆಲಂಗಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ನೆಗೆಟಿವ್​ ವರದಿ ನಿರ್ಬಂಧವಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಈಗ ಹೊಸ ಮಾರ್ಗಸೂಚಿ ಹೊರಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...