ಮಂಗಳೂರು: ಡೆಂಘೀ ಟೆಸ್ಟಿಂಗ್ ಬೆಲೆ ಹೆಚ್ಚಳ ಕಂಡು ಬಂದಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ಪರೀಕ್ಷೆಗೆ ದರ ನಿಗದಿಪಡಿಸಲಾಗಿದ್ದು, ನಿಗದಿತ ದರ ಪಡೆದುಕೊಳ್ಳಬೇಕು. ಬೆಲೆ ಹೆಚ್ಚಳ ಮಾಡಿದಲ್ಲಿ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಖಾಸಗಿ ಆಸ್ಪತ್ರೆಗಳು, ಟೆಸ್ಟಿಂಗ್ ಸೆಂಟರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಲಾರ್ವಾ ಉತ್ಪತ್ತಿ ಸ್ಥಳದಲ್ಲಿ ನಿಯಂತ್ರಣ ಮಾಡುವುದು ಮೊದಲ ಕೆಲಸವಾಗಬೇಕು. ಸಂಗ್ರಹವಾಗುವ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ ಅದನ್ನು ನಿಯಂತ್ರಿಸಬೇಕು. ಸಾರ್ವಜನಿಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.