ಕ್ಯಾನ್ಸರ್ ಮಾರಕ ಖಾಯಿಲೆಯಾಗಿದೆ. ಈ ಕ್ಯಾನ್ಸರ್ ಗೆ ವಯಸ್ಸಿನ ಮಿತಿಯಿಲ್ಲ. ಸಣ್ಣ ಮಕ್ಕಳನ್ನೂ ಈಗ ಕ್ಯಾನ್ಸರ್ ಕಾಡ್ತಿದೆ. ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕಿಗೆ ಗರ್ಭಾಶಯ ಕ್ಯಾನ್ಸರ್ ಆಗಿದೆ.
ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ತೀವ್ರ ಹೊಟ್ಟೆ ನೋವು ಹಾಗೂ ಹೊಟ್ಟೆ ಉಬ್ಬುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ವೇಳೆ ಆಕೆಗೆ ಗರ್ಭಾಶಯದ ಕ್ಯಾನ್ಸರ್ ಇರುವುದು ಕಂಡು ಬಂದಿದೆ. ಕ್ಯಾನ್ಸರ್ ಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ.
ಒಂದು ಕಿಮೋಥೆರಪಿ ನಡೆದಿದೆ. ಬಾಲಕಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರ್ತಿದೆ. ಮೂರ್ನಾಲ್ಕು ಗಡ್ಡೆಗಳು ಆಕೆಯ ಗರ್ಭಾಶಯದಲ್ಲಿವೆ. ಆದ್ರೆ ಗಡ್ಡೆಗಳು ಇನ್ನು ಬೆಳೆಯಲು ಸಾಧ್ಯವಿಲ್ಲ ಎಂದು ವೈದ್ಯರ ಹೇಳಿದ್ದಾರೆ. ನವೆಂಬರ್ ನಲ್ಲಿ ಇನ್ನೊಂದು ಪರೀಕ್ಷೆ ನಡೆಯಲಿದ್ದು, ಅದ್ರಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಸಿಗಲಿದೆ ಎಂದು ಆಕೆ ತಾಯಿ ಹೇಳಿದ್ದಾಳೆ.
ಕೊರೊನಾ ನಂತ್ರ ಬಾಲಕಿ ಶಾಲೆಗೆ ಹೋಗಲು ಶುರು ಮಾಡಿದ್ದಾಳಂತೆ. ಆದ್ರೆ ಕೂದಲು ಉದುರಿದ ಕಾರಣ ಆಕೆ ವಿಗ್ ಬಳಸುತ್ತಿದ್ದಳಂತೆ. ವಿಗ್ ನೋಡಿದ ಶಾಲೆ ಮಕ್ಕಳು ಆಕೆಗೆ ಹಿಂಸೆ ನೀಡಲು ಶುರು ಮಾಡಿದ್ದರಂತೆ. ಇದ್ರಿಂದ ಬಾಲಕಿ ಬೇಸರಗೊಂಡಿದ್ದಳು ಎನ್ನಲಾಗಿದೆ. ತಾಯಿ, ಶಾಲೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಳಂತೆ.
ಆದ್ರೆ ಶಾಲೆಯಿಂದ ಮನೆಗೆ ಬಂದಾಗ ಮಗಳನ್ನು ನೋಡಿ ತಾಯಿ, ಅಚ್ಚರಿಗೊಂಡಿದ್ದಾಳೆ. ವಿಗ್ ತೆಗೆದ ಬಾಲಕಿ, ಸ್ಕೂಲ್ ಡ್ರೆಸ್ ಧರಿಸಿ,ಶಾಲೆಗೆ ಹೋಗಲು ಸಿದ್ಧವಾಗಿದ್ದಳಂತೆ. ಯಾರ ಮಾತಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಶಾಲೆಗೆ ಹೋಗ್ತೇನೆಂದು ಬಾಲಕಿ ಹೇಳಿದ್ದು, ಆಕೆ ಧೈರ್ಯ ತಾಯಿಯನ್ನು ಬೆರಗಾಗಿಸಿದೆಯಂತೆ.