ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಬಳಕೆ ಮಾಡುವ ಸಾಧನಗಳ ಖರೀದಿಯಲ್ಲಿ ಆರೋಗ್ಯ ಇಲಾಖೆ 31 ಕೋಟಿ ರೂಪಾಯಿ ಅಧಿಕ ಹಣ ನೀಡಿದ್ದು, ಈ ಬಗ್ಗೆ ಉತ್ತರ ಕೊಡುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ಸಾಧನಗಳ ಖರೀದಿಯಲ್ಲಿ ಬೇರೆ ರಾಜ್ಯಗಳಿಗಿಂತ 31 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಆರೋಗ್ಯ ಇಲಾಖೆ ನೀಡಿದೆ ಎನ್ನಲಾಗಿದ್ದು, ಈ ಬಗ್ಗೆ ಉತ್ತರ ನೀಡಲು ಸೂಚಿಸಲಾಗಿದೆ.
ರಕ್ತಪರೀಕ್ಷೆ ಉಪಕರಣದ ಒಂದು ಯೂನಿಟ್ ಗೆ 2.96 ಲಕ್ಷ ರೂಪಾಯಿ ನೀಡಿ 1195 ಯೂನಿಟ್ ಗಳನ್ನು ರಾಜ್ಯ ಖರೀದಿಸಿದೆ. ಹಿಮಾಚಲಪ್ರದೇಶ ಇದೇ ಯೂನಿಟ್ ಗೆ 1.30 ಲಕ್ಷ ರೂಪಾಯಿ ನೀಡಿದ್ದು, 25 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೀಡಿರುವುದೇಕೆ ಎಂದು ಪ್ರಶ್ನಿಸಲಾಗಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಹೆಚ್ಚುವರಿ ಹಣ ನೀಡಿರುವುದರ ಹಿಂದಿನ ಉದ್ದೇಶವೇನು ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಉತ್ತರ ನೀಡುವಂತೆ ನೋಟಿಸ್ ನೀಡಿದೆ ಎನ್ನಲಾಗಿದೆ.