ಬೆಂಗಳೂರು: ಮಧುಮೇಹ ಎದುರಿಸುತ್ತಿರುವ ಮಕ್ಕಳಿಗೆ ಸರ್ಕಾರಿ ವ್ಯವಸ್ಥೆಯಡಿ ಉಚಿತವಾಗಿ ಇನ್ಸುಲಿನ್ ಒದಗಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಜನವರಿ ವೇಳೆಗೆ ಇನ್ಸುಲಿನ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಲ್ಲಿ ಇತ್ತೀಚೆಗೆ ಟೈಪ್ 1 ಡಯಾಬಿಟಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಸಮಸ್ಯೆಗೆ ಒಳಗಾದವರಿಗೆ ಇನ್ಸುಲಿನ್ ಅಗತ್ಯವಾಗಿದೆ.
ಸರ್ಕಾರಿ ವ್ಯವಸ್ಥೆಯಡಿ ಉಚಿತವಾಗಿ ಇನ್ಸುಲಿನ್ ಸಿಗದ ಕಾರಣ ಪ್ರತಿ ತಿಂಗಳು ಸುಮಾರು 5 -6 ಸಾವಿರ ರೂ. ವೆಚ್ಚವಾಗುತ್ತಿದೆ. ಅತಿಯಾದ ತೂಕ, ವ್ಯಾಯಾಮ ಕೊರತೆ, ಕೊಬ್ಬು ಮಿಶ್ರಿತ ಆಹಾರ ಸೇವನೆ, ಅನಿಯಂತ್ರಿತ ರಕ್ತದೊತ್ತಡ, ಕುಟುಂಬದಲ್ಲಿ ಸಕ್ಕರೆ ಕಾಯಿಲೆ ಸೇರಿ ವಿವಿಧ ಕಾರಣಗಳಿಂದ ಮಕ್ಕಳಲ್ಲಿಯೂ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಕ್ಕಳು ಟೈಪ್ 1 ಡಯಾಬಿಟಿಸ್ ನಿಂದ ಬಳಲುತ್ತಿದ್ದಾರೆ. 6-6 ಸಾವಿರ ಮಕ್ಕಳು ಇನ್ಸುಲಿನ್ ಗಾಗಿ ಸರ್ಕಾರಿ ಆಸ್ಪತ್ರೆಗೆಳಿಗೆ ಬರುವ ಅಂದಾಜಿದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರು ಎಂದು ವಿಂಗಡಿಸದೇ ಎಲ್ಲ ಮಕ್ಕಳನ್ನು ಯೋಜನೆ ಅಡಿ ಸೇರಿಸಿ ಇನ್ಸುಲಿನ್ ನೀಡಲಾಗುವುದು. ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಉಚಿತವಾಗಿ ಇನ್ಸುಲಿನ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 25 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಸುಲಿನ್ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ.