ಮಾರ್ಗಸೂಚಿಯ ಪ್ರಕಾರ ಸಾಮಾನ್ಯ ವಯಸ್ಕರಿಗೆ ಜ್ವರವಿದ್ದರೆ, 325 mg ನಿಂದ 650 mg ಪ್ಯಾರಾಸಿಟಮಾಲ್ ಅನ್ನು 4 ರಿಂದ 6 ಗಂಟೆಗಳ ಮಧ್ಯಂತರದಲ್ಲಿ ಸೇವಿಸಬಹುದು. 8 ಗಂಟೆಗಳ ಮಧ್ಯಂತರವಿದ್ದಲ್ಲಿ 1000 mg ವರೆಗೆ ಔಷಧವನ್ನು ಬಳಸಬಹುದು. ಆದರೆ ರೋಗಗಳು, ತೂಕ, ಎತ್ತರದ ಆಧಾರದ ಮೇಲೆ ಡೋಸೇಜ್ ಅನ್ನು ನಿರ್ಧರಿಸಲಾಗುತ್ತದೆ. ಜ್ವರದ ಸಂದರ್ಭದಲ್ಲಿ 500 ಮಿಗ್ರಾಂ ಪ್ಯಾರಸಿಟಮಾಲ್ ಅನ್ನು 6 ಗಂಟೆಗಳ ನಂತರ ಮಾತ್ರ ತೆಗೆದುಕೊಳ್ಳಬೇಕು.
ಚಿಕ್ಕ ಮಕ್ಕಳಿಗೆ ಪ್ಯಾರಾಸಿಟಮಾಲ್ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಮಗುವಿಗೆ ಜ್ವರವಿದ್ದು ಅದಕ್ಕೆ ಒಂದು ತಿಂಗಳಿಗಿಂತ ಕಡಿಮೆ ವಯಸ್ಸಾಗಿದ್ದರೆ, ಮಗುವಿನ ತೂಕವನ್ನು ಅನುಸರಿಸಿ ಮಾತ್ರೆ ನೀಡಬೇಕು. ಅಂದರೆ ಪ್ರತಿ ಕೆಜಿಗೆ 10 ರಿಂದ 15 ಮಿಗ್ರಾಂ ಪ್ಯಾರಸಿಟಮಾಲ್ ಅನ್ನು 4 ರಿಂದ 6 ಗಂಟೆಗಳ ಮಧ್ಯಂತರದಲ್ಲಿ ನೀಡಬೇಕು. ಅದೇ ಪ್ರಮಾಣವನ್ನು 6 ರಿಂದ 8 ಗಂಟೆಗಳ ಮಧ್ಯಂತರದಲ್ಲಿ 12 ವರ್ಷಗಳವರೆಗಿನ ಮಗುವಿಗೆ ನೀಡಬೇಕು.
ದೇಹಬಾಧೆಗೆ ಪ್ಯಾರಾಸಿಟಮಾಲ್..?
ಸಾಮಾನ್ಯ ವಯಸ್ಕರಿಗೆ ದೇಹದ ನೋವಿದ್ದರೆ, 325 ರಿಂದ 650 ಎಂಜಿ ಪ್ಯಾರಾಸಿಟಮಾಲ್ ಅನ್ನು 4 ರಿಂದ 6 ಗಂಟೆಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ. ಅದೇ ಸಮಯದಲ್ಲಿ, 1000 mg ಔಷಧಿಯನ್ನು 6 ರಿಂದ 8 ಗಂಟೆಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಬಹುದು. 500 mg ಔಷಧಿಗಳನ್ನು 4 ರಿಂದ 6 ಗಂಟೆಗಳ ಮಧ್ಯಂತರದಲ್ಲಿ ತೆಗೆದುಕೊಳ್ಳಬೇಕು. ಚಿಕ್ಕ ಮಕ್ಕಳಿಗೆ 6 ರಿಂದ 8 ಗಂಟೆಗಳ ನಡುವೆ ದೇಹ ತೂಕದ ಪ್ರತಿ ಕೆಜಿಗೆ 10 ರಿಂದ 15 ಎಂಜಿ ನೀಡಬಹುದು.
ಪ್ಯಾರಾಸಿಟಮಾಲ್ ಬಳಸುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ನಿಮಗೆ ಜ್ವರವಿದ್ದು ಮೂರು ದಿನಗಳಿಂದಲೂ ಪ್ಯಾರಾಸಿಟಮಾಲ್ ಸೇವಿಸಿದ ನಂತರವೂ, ಜ್ವರ ಕಡಿಮೆಯಾಗದಿದ್ದರೆ ಮಾತ್ರೆ ತೆಗೆದುಕೊಳ್ಳುವುದನ್ನ ಬಿಟ್ಟು ವೈದ್ಯರನ್ನು ಸಂಪರ್ಕಿಸಿ. ಯಾವುದೇ ರೀತಿಯ ನೋವಿಗೆ 10 ದಿನಗಳಿಗಿಂತ ಹೆಚ್ಚು ಕಾಲ ಪ್ಯಾರಾಸಿಟಮಾಲ್ ತೆಗೆದುಕೊಳ್ಳಬಾರದು. ಇದಲ್ಲದೇ ಕಿಡ್ನಿ ಸಮಸ್ಯೆ, ಮದ್ಯಪಾನ ಮಾಡುವವರು, ಕಡಿಮೆ ತೂಕ ಇದ್ದಲ್ಲಿ ವೈದ್ಯರ ಸಲಹೆ ಇಲ್ಲದೆ ಪ್ಯಾರಾಸಿಟಮಾಲ್ ಸೇವಿಸಬಾರದು.
ಪ್ಯಾರಾಸಿಟಮಾಲ್ ನ ಮಿತಿಮೀರಿದ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು
ಪ್ಯಾರಾಸಿಟಮಾಲ್ ನ ಮಿತಿಮೀರಿದ ಸೇವನೆಯು ಕೆಲವೊಮ್ಮೆ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಅಲರ್ಜಿಗಳು, ಚರ್ಮದ ದದ್ದುಗಳು, ರಕ್ತದ ಅಸ್ವಸ್ಥತೆಗಳು ಉಂಟಾಗಬಹುದು. ಇದಲ್ಲದೆ, ಪ್ಯಾರಾಸಿಟಮಾಲ್ ಅನ್ನು ತಪ್ಪಾಗಿ ಬಳಸುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವಿದೆ. ಮಿತಿಮೀರಿದ ಸೇವನೆಯು ಅತಿಸಾರ, ಅತಿಯಾದ ಬೆವರುವಿಕೆ, ಹಸಿವಿನ ಕೊರತೆ, ಚಡಪಡಿಕೆ, ವಾಂತಿ, ಹೊಟ್ಟೆ ನೋವು, ಕಿಬ್ಬೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು.