ಆಲೂಗಡ್ಡೆ ಬಹುತೇಕ ಎಲ್ಲರೂ ಇಷ್ಟಪಡುವಂತಹ ರುಚಿಕರ ತರಕಾರಿ. ಅನೇಕ ಬಗೆಯ ಅಡುಗೆಗಳಲ್ಲಿ ಇದನ್ನು ಬಳಸುತ್ತೇವೆ. ಆಲೂಗಡ್ಡೆ ಚಿಪ್ಸ್ ಸೇರಿದಂತೆ ಹಲವು ಬಗೆಯ ಸ್ನಾಕ್‌ಗಳಿಗೂ ಇದನ್ನು ಹಾಕುತ್ತೇವೆ. ಆಲೂಗಡ್ಡೆಯಿಂದ ಮಾಡುವ ಫ್ರೆಂಚ್ ಫ್ರೈ ಅಂತೂ ಮಕ್ಕಳ ಫೇವರಿಟ್. ಆಲೂಗಡ್ಡೆ ಜ್ಯೂಸ್ ಬಗ್ಗೆ ನಿಮಗೆ ತಿಳಿದಿದೆಯಾ? ಪೋಷಕಾಂಶ ಭರಿತ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅನೇಕ ರೋಗಗಳನ್ನು ತಡೆಯಲು ಪ್ರಯೋಜನಕಾರಿಯಾಗಿದೆ. ಆಲೂಗಡ್ಡೆ ಜ್ಯೂಸ್ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್‌ನಂತಹ ಪೋಷಕಾಂಶಗಳಿವೆ, ಇವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆಲೂಗಡ್ಡೆ ಜ್ಯೂಸ್ ಮೈಗ್ರೇನ್‌ಗೆ ಕೂಡ ಉತ್ತಮ ಮನೆಮದ್ದು. ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ಒತ್ತಡ, ಆಯಾಸ ಮತ್ತು ಖಿನ್ನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೈಗ್ರೇನ್ ಅನ್ನು ತೆಗೆದುಹಾಕುವಲ್ಲಿ ಈ ರಸವು ಪ್ರಯೋಜನಕಾರಿಯಾಗಿದೆ. ಆಲೂಗೆಡ್ಡೆಯ ಜ್ಯೂಸ್ ಕುಡಿಯುವುದರ ಜೊತೆಗೆ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವಿನ ಸಮಸ್ಯೆಯೂ ದೂರವಾಗುತ್ತದೆ.
ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳು ಹುಣ್ಣುಗಳನ್ನು ಕಡಿಮೆ ಮಾಡುತ್ತವೆ. ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದು ಹುಣ್ಣುಗಳು ಬೆಳೆಯುವುದನ್ನು ತಡೆಯುತ್ತದೆ. ಆಲೂಗೆಡ್ಡೆ ಜ್ಯೂಸ್ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿ ರೂಪುಗೊಳ್ಳುತ್ತದೆ. ಆಲೂಗಡ್ಡೆಯಲ್ಲಿರುವ ವಿಟಮಿನ್ ಸಿ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುತ್ತದೆ.
ಆಲೂಗೆಡ್ಡೆ ರಸವು ಶೀತ ಮತ್ತು ಜ್ವರದಂತಹ ಕಾಯಿಲೆಗಳನ್ನು ಗುಣಪಡಿಸಲು ಸಹ ಪರಿಣಾಮಕಾರಿಯಾಗಿದೆ. ಆಲೂಗಡ್ಡೆ ಜ್ಯೂಸ್ ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಲಿವರ್ ಕ್ಲೀನ್ ಆಗುತ್ತದೆ. ಇದು ಹೆಪಟೈಟಿಸ್‌ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಬಲ್ಲದು.