ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ಕ್ಯಾರೋಟಿನ್, ಕಬ್ಬಿಣದಂಶ, ತಾಮ್ರ, ಫಾಲಟ್ ಮತ್ತು ಮೆಗ್ನೀಷಿಯಂ ಇದೆ. ಬೇರೆ ಯಾವುದೇ ಗೆಡ್ಡೆಗಳಲ್ಲಿ ಇರದಂತಹ ನಾರಿನಂಶವು ಅಧಿಕವಾಗಿದೆ. ಇದರ ಪ್ರಯೋಜನಗಳು ಏನು ಅಂತ ತಿಳಿಯೋಣ.
* ಗೆಣಸಿನಲ್ಲಿ ವಿಟಮಿನ್ ಸಿ, ಬಿ2, ಬಿ6, ಇ ಮತ್ತು ಬಿಯೋಟಿನ್ ಸಮೃದ್ಧವಾಗಿದೆ. ಇದರಲ್ಲಿ ಪಾಂಟೊಥೆನಿಕ್ ಆಮ್ಲ ಇದೆ. ಕಡಿಮೆ ಕ್ಯಾಲೊರಿ ಮತ್ತು ಅಧಿಕ ಪ್ರೋಟೀನ್ ಇದೆ.
* ಇನ್ಸುಲಿನ್ ಗೆ ಪ್ರತಿಕ್ರಿಯೆ ನೀಡುವ ಕ್ಯಾರೋಟಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.
* ಹಲ್ಲುಗಳು, ಮೂಳೆ, ಚರ್ಮ, ನರಗಳು ಮತ್ತು ಥೈರಾಯ್ಡ್ ಗ್ರಂಥಿಗಳ ಆರೋಗ್ಯಕ್ಕೆ ವಿಟಮಿನ್ ಡಿ ಪ್ರಾಮುಖ್ಯವಾಗಿದೆ. ಇದರಲ್ಲಿರುವ ವಿಟಮಿನ್ ಡಿ ಮೂಳೆಗಳನ್ನು ಆರೋಗ್ಯವಾಗಿಡುತ್ತದೆ.
* ಗೆಣಸಿನಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಕರುಳನ್ನು ಸ್ವಚ್ಛ ಮಾಡುವುದು ಮತ್ತು ನಾರಿನಂಶವು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದು ಮಲಬದ್ಧತೆಗೂ ಸಹಕಾರಿ.